ಕೊಡಗಿನಲ್ಲಿ ಕೋವಿಡ್ : ಸೋಂಕಿತರ ಸಂಖ್ಯೆ 4408 ಕ್ಕೆ ಏರಿಕೆ

October 18, 2020

ಮಡಿಕೇರಿ ಅ.18 : ಜಿಲ್ಲೆಯಲ್ಲಿ ಭಾನುವಾರ 90 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 4408 ಆಗಿದ್ದು, 3614 ಮಂದಿ ಗುಣಮುಖರಾಗಿದ್ದಾರೆ. 733 ಸಕ್ರಿಯ ಪ್ರಕರಣಗಳಿದ್ದು, 61 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 485 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
37 ಪ್ರಕರಣಗಳು ಆರ್.ಟಿ.ಪಿ.ಸಿ.ಆರ್ ಮೂಲಕ ಹಾಗೂ 53 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಮಡಿಕೇರಿ ತಾಲೂಕಿನಲ್ಲಿ 17 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 5 ಪ್ರಕರಣಗಳು ಆರ್.ಟಿ.ಪಿ.ಸಿ.ಆರ್ ಮತ್ತು 12 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಪತ್ತೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ 42 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದೆ. ಈ ಪೈಕಿ 24 ಆರ್.ಟಿ.ಪಿ.ಸಿ.ಆರ್ ಮತ್ತು 18 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ವಿರಾಜಪೇಟೆ ತಾಲೂಕಿನಲ್ಲಿ 29 ಹೊಸ ಕೋವಿಡ್-19 ಪ್ರಕರಣಗಳು ಕಂಡುಬಂದಿದೆ. ಈ ಪೈಕಿ 6 ಆರ್.ಟಿ.ಪಿ.ಸಿ.ಆರ್ ಮತ್ತು 23 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.
ಹೊರ ಜಿಲ್ಲೆಯವರ ಪೈಕಿ 2 ಹೊಸ ಕೋವಿಡ್-19 ಪ್ರಕರಣಗಳು ಕಂಡು ಬಂದಿದೆ. ಈ ಪೈಕಿ 2 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.