ಕೊಡಗು ಕಸಾಪದಿಂದ ಅಂತರ್ಜಾಲ ದಸರಾ ಕವಿಗೋಷ್ಠಿ

October 18, 2020

ಮಡಿಕೇರಿ ಅ.18 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಈ ಬಾರಿ ದಸರಾ ಅಂಗವಾಗಿ ಜಿಲ್ಲಾ ಮಟ್ಟದ ಅಂತರ್ಜಾಲ ಕವಿಗೋಷ್ಠಿಯನ್ನು ಏರ್ಪಡಿಸಿದೆ.
ಜಿಲ್ಲೆಯ ಕವಿಗಳಿಗೆ ಹಾಗೂ ಕಲಾವಿದರಿಗೆ ಜಗತ್ತನ್ನು ಕಾಡುತಿರುವ ಮಹಾಮಾರಿ ಕೊರೋನದಿಂದ ತಮ್ಮ ಪ್ರತಿಭೆ ತೋರಲು ಸಮಸ್ಯೆ ಯಾಗಿರುವ ಕಾರಣ ಅಂತರ್ಜಾಲದಲ್ಲಿ ಕವಿಗೋಷ್ಠಿ ಏರ್ಪಡಿಸಿದೆ. ಭಾಗವಹಿಸಿದ ಕವಿಗಳಿಗೆ ಅಂಚೆ ಮೂಲಕ ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆ ಕಳುಹಿಸಲಾಗುವುದು. ಮೊದಲು ಹೆಸರು ನೊಂದಾಯಿಸಿಕೊಂಡ 30 ಕವಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ದಿನಾಂಕ ಇದೇ ಅ.24 ರಂದು ಬೆಳಿಗ್ಗೆ 10.30 ಕ್ಕೆ ಕಾರ್ಯಕ್ರಮ ನಡೆಯಲಿದೆ. ನೋಂದಾಯಿಸಿ ಕೊಂಡವರಿಗೆ ನಂತರ ಅಂತರ್ಜಾಲ ಜೋಡಣೆ ಕಳುಹಿಸಲಾಗುವುದು ಹೆಚ್ಚಿನ ಮಾಹಿತಿಗೆ 9980988123 ಸಂಪರ್ಕಿಸಬಹುದು ಎಂದು ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!