ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣಕ್ಕೆ ರೆಡ್ ಕ್ರಾಸ್ ನಿಂದ ಸ್ಯಾನಿಟೈಸರ್ ಸ್ಟಾಂಡ್ ವಿತರಣೆ

18/10/2020

ಮಡಿಕೇರಿ ಅ.18 : ಕೊಡಗು ಜಿಲ್ಲಾ ರೆಡ್ ಕ್ರಾಸ್ ವತಿಯಿಂದ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಯಾನಿಟೈಸರ್ ಸ್ಟಾಂಡ್ ನೀಡಲಾಯಿತು.
ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಸಂಚಾರ ನಿಯಂತ್ರಕರಿಗೆ ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ ಮತ್ತು ಪ್ರಧಾನ ಕಾರ್ಯದರ್ಶಿ ಮುರಳಿ ಸ್ಯಾನಿಟೈಸರ್ ಸ್ಟಾಂಡ್ ನೀಡಿದರು. ಬಸ್ ನಿಲ್ದಾಣಕ್ಕೆ ಬರುವ ನೂರಾರು ಪ್ರಯಾಣಿಕರು ಕೈ ಸ್ವಚ್ಚತೆ ಮಾಡಿಕೊಳ್ಳಲು ಇದು ನೆರವಾಗಲಿದೆ ಎಂದು ರವೀಂದ್ರ ರೈ ಹೇಳಿದರು.
ಈ ಸಂದರ್ಭ ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ., ನಿರ್ದೇಶಕ ಎಂ.ಧನಂಜಯ್, ಸರ್ಕಾರಿ ಬಸ್ ನಿಲ್ದಾಣಕ್ಕೆ ರೆಡ್ ಕ್ರಾಸ್ ನಿಂದ ಸ್ಯಾನಿಟೈಸರ್ ಸ್ಟಾಂಡ್.
ಈ ಸಂದರ್ಭ ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ., ನಿರ್ದೇಶಕರಾದ ಎಂ.ಧನಂಜಯ್, ದರ್ಶನ್ ಬೋಪಯ್ಯ, ಪೊನ್ನಮ್ಮ ಹಾಜರಿದ್ದರು.