ಬಹುಮಾನವಾಗಿ ಬಂದ ಚಿನ್ನ ಶ್ರೀಕೋಟೆ ಮಾರಿಯಮ್ಮನಿಗೆ ಅರ್ಪಣೆ
18/10/2020

ಮಡಿಕೇರಿ ಅ.18 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕೋಟೆ ಮಾರಿಯಮ್ಮ ದೇವಾಲಯದ ದಸರಾ ಮಂಟಪಕ್ಕೆ 2015 ರಿಂದ 2019 ರವರೆಗೆ ಬಹುಮಾನದ ರೂಪದಲ್ಲಿ ಬಂದ ಚಿನ್ನವನ್ನು ಆಭರಣವನ್ನಾಗಿ ಮಾಡಿ ಶ್ರೀಕೋಟೆ ಮಾರಿಯಮ್ಮ ದೇವಿಗೆ ಸಮರ್ಪಿಸಲಾಯಿತು.
ರೂ.1.32 ಲಕ್ಷ ರೂ. ಮೌಲ್ಯದ ಒಟ್ಟು 27.6 ಗ್ರಾಂ ಚಿನ್ನಾಭರಣವನ್ನು ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಅಧ್ಯಕ್ಷ ಸಂತೋಷ್ ನಾಗರಾಜ್ ಮತ್ತು ಸರ್ವ ಸದಸ್ಯರುಗಳು ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಕೃಷ್ಣಶೆಟ್ಟಿ ಹಾಗೂ ಅರ್ಚಕ ಅನೀಶ್ ಅವರಿಗೆ ಹಸ್ತಾಂತರಿಸಿದರು. ಮಿತ್ರ ಮಂಡಳಿ ಮತ್ತು ಟ್ರಸ್ಟ್ ನ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.