ಇಂಗ್ಲೆಂಡ್ ನಿಂದ ಕೋವಿಡ್ ಲಸಿಕೆ

October 19, 2020

ಲಂಡನ್ ಅ.19 : ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ ಸಿದ್ಧವಾಗಬಹುದು ಎಂದು ಇಂಗ್ಲೆಂಡ್ ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.
ಅಕ್ಸ್ ಫರ್ಡ್ ಯೂನಿವರ್ಸಿಟಿ ಸೃಷ್ಟಿಸಿರುವ ಲಸಿಕೆಯನ್ನು ಅಸ್ಟ್ರಾಜಿನೆಕಾ ಕಂಪನಿ ತಯಾರಿಸುತ್ತಿದ್ದು, ಡಿಸೆಂಬರ್ ನಲ್ಲಿ ಕ್ರಿಸ್‍ಮಸ್ ನಂತರ ಸಿದ್ಧಗೊಳ್ಳಬಹುದೆಂದು ಇಂಗ್ಲೆಂಡ್ ಉಪ ಮುಖ್ಯ ಆರೋಗ್ಯಾಧಿಕಾರಿ ಜೊನಾಥನ್ ವ್ಯಾನ್-ಟಾಮ್ ಸಂಸತ್ ಸದಸ್ಯರಿಗೆ ಹೇಳಿರುವುದಾಗಿ ವರದಿಯಾಗಿದೆ.ಕೊರೋನಾ ವೈರಸ್ ಸಾಂಕ್ರಾಮಿಕ ಕುರಿತ ಸರ್ಕಾರದ ಸಲಹೆಗಾರರಲ್ಲಿ ಜೊನಾಥನ್ ವ್ಯಾನ್-ಟಾಮ್ ಕೂಡಾ ಒಬ್ಬರಾಗಿದ್ದಾರೆ.
ಭಾರತದಲ್ಲಿ ಸೆರಮ್ ಇನ್ಸಿಟಿಟ್ಯೂಟ್ ಆಪ್ ಇಂಡಿಯಾ ಈ ಲಸಿಕೆಯ ಪಾಲುದಾರರಾಗಿದ್ದು, ಪ್ರಯೋಗಗಳು ನಡೆಯುತ್ತಿವೆ. ಕ್ರಿಸ್‍ಮಸ್ ನಂತರ ಕೋವಿಡ್-19 ಲಸಿಕೆಯನ್ನು ರೋಗಿಗಳಿಗೆ ನೀಡಲಾಗುವುದು, ಇದು ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಹಾಗೂ ಸಾವಿನ ಪ್ರಮಾಣದ ಮೇಲೆ ಮಹತ್ವದ ಪರಿಣಾಮ ಬೀರಲಿದೆ.