ಫೆಬ್ರವರಿಯಲ್ಲಿ ಕಡಿಮೆಯಾಗಲಿದೆ ಕೊರೋನಾ

19/10/2020

ನವದೆಹಲಿ ಅ.19 : ದೇಶದಲ್ಲಿ ಉತ್ತುಂಗಕ್ಕೇರಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಒಂದು ವೇಳೆ ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಮುಂದುವರೆಸಿದರೆ ಮುಂದಿನ ವರ್ಷದ ಫೆಬ್ರವರಿಯೊಳಗೆ ಸಕ್ರಿಯ ಪ್ರಕರಣಗಳು 40 ಸಾವಿರಕ್ಕಿಂತ ಕಡಿಮೆಯಾಗಲಿವೆ ಎಂದು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಭಾನುವಾರ ಹೇಳಿದೆ.
ಕೋವಿಡ್-19 ಪ್ರಗತಿಗೆ ರಾಷ್ಟ್ರೀಯ ಸೂಪರ್ ಮಾಡೆಲ್ ನ್ನು ವಿಕಸಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಸಮಿತಿಯನ್ನು ಜೂನ್ , 2020 ರಂದು ರಚಿಸಿತು.
ಪ್ರೊಫೆಸರ್ ಎಂ. ವಿದ್ಯಾಸಾಗರ್, ಎಫ್ ಆರ್ ಎಸ್ ( ಐಐಟಿ ಹೈದ್ರಾಬಾದ್ ಮುಖ್ಯಸ್ಥ) ಪ್ರೊಫೆಸರ್ ಎಂ ಅಗರ್ ವಾಲ್ ( ಐಐಟಿ ಕಾನ್ಫುರ ಮುಖ್ಯಸ್ಥ) ಪ್ರೊಫೆಸರ್ ಬಿ ಬಾಗ್ಚಿ (ಐಐಎಸ್ ಸಿ ಬೆಂಗಳೂರು) ಪ್ರೊಫೆಸರ್ ಎ ಬೊಸ್ (ಎಸ್ ಐಸ್ ಐ ಕೊಲ್ಕತ್ತಾ) ಡಾ. ಜಿ. ಕಂಗ್ , ಎಫ್ ಆರ್ ಎಸ್ (ಸಿಎಂಸಿ ವೆಲ್ಲರೂ) ಲೆಫ್ಟಿನೆಂಟ್ ಜನರಲ್ ಎಂ ಕಾನಿಟ್ಕರ್ ಮತ್ತು ಪ್ರೊಫೆಸರ್ ಎಸ್.ಕೆ. ಪಾಲ್ (ಐಎಸ್ ಐ ಕೊಲ್ಕತ್ತಾ) ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ.
ಮುಂಬರುವ ಹಬ್ಬದ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಮತ್ತು ಮುನ್ನೆಚ್ಚರಿಕಾ ಕ್ರಮಗಳಲ್ಲಿ ಉದಾಸೀನತೆಯಿಂದಾಗಿ ತಿಂಗಳೊಳಗೆ 26 ಲಕ್ಷ ಸೋಂಕುಗಳಿಗೆ ಕಾರಣವಾಗಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.