ಮೈಸೂರು ವಿ.ವಿ.ಗೆ 100 ವರ್ಷದ ಸಂಭ್ರಮ

October 19, 2020

ಮೈಸೂರು ಅ.19 : ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಮೈಸೂರು ವಿ.ವಿ.ಗೆ ಇದೀಗ 100 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ ಉದ್ದೇಶಿಸಿ ಸೋಮವಾರ ಭಾಷಣ ಮಾಡಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಗಳ ಕುಲಾಧಿತಿಗಳು ಹಾಗೂ ರಾಜ್ಯಪಾಲ ವಜೂಭಾಯಿ ವಾಲ, ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮೈಸೂರು ವಿಶ್ವವಿದ್ಯಾಲಯವು 1916ರ ಜುಲೈ 27 ರಂದು ಸ್ಥಾಪನೆಯಾಗಿದ್ದು, ಕರ್ನಾಟಕ, ದಕ್ಷಿಣ ಭಾರತದ ಪ್ರಥಮ ಹಾಗೂ ದೇಶದ 6ನೇ ವಿಶ್ವವಿದ್ಯಾಲಯವಾಗಿದೆ.