ಮಂಡಿ ನೋವಿಗೆ ಸರಳ ಉಪಾಯಗಳು

October 19, 2020

ಬಿಡುವಿಲ್ಲದ ಅತಿ ಹೆಚ್ಚು ಕೆಲಸ, ಅತಿ ಹೆಚ್ಚಾಗಿ ಪುಟ್ಬಾಲ್ ಆಡುವುದು, ಇವುಗಳು ಸಹ ಮಂಡಿ ನೋವಿಗೆ ಕಾರಣಗಳೆಂದು ಊಹಿಸಬಹುದು. ಅತಿಯಾದ ಕೆಲಸದ ನಂತರ ಮೂಳೆಗಳಲ್ಲಿ ನೋವು ಕಾಣಿಸುವುದು ಸಾಮಾನ್ಯ. ತಜ್ಞರು ಹೇಳುವ ಪ್ರಕಾರ ಮಂಡಿ ನೋವಿಗೆ ಅನೇಕ ರೀತಿಯ ಕಾರಣಗಳಿವೆ. ವಿಟಮಿನ್ – ಡಿ, ಕ್ಯಾಲ್ಸಿಯಂ, ಕಬ್ಬಿಣದ ಅಂಶ ಕಡಿಮೆಯಾಗುತ್ತಿದ್ದಂತೆ ದೇಹದಲ್ಲಿ ಮಂಡಿ ನೋವು ಆರಂಭವಾಗುತ್ತದೆ. ಇದಕ್ಕೆ ವಯಸ್ಸಿನ ಬೇಧವಿಲ್ಲ.

ಮಂಡಿ ನೋವನ್ನು ತಡೆಯುವ ಬಗೆ
ಹಲವರು ಹೇಳುವ ರೀತಿ ಕಾಯಿಲೆ ಬಂದ ಮೇಲೆ ಹೆಣಗಾಡುವುದಕ್ಕಿಂತ ಬರದಂತೆ ನೋಡಿ ಕೊಳ್ಳುವುದು ವಾಸಿ ಮತ್ತು ಅದಕ್ಕಿಂತ ಉತ್ತಮ ಕೆಲಸ ಇನ್ನೊಂದಿಲ್ಲ. ಆದರೆ ಯಾವುದೇ ಕಾಯಿಲೆ ಬರದಂತೆ ತಡೆಯುವ ಕೆಲಸ ಕಷ್ಟವೇನಲ್ಲ. ಕೇವಲ ನಮ್ಮ ಜೀವನಶೈಲಿಯಲ್ಲಿ ನಾವು ಮಾಡುವ ಕೆಲವೊಂದು ಸಣ್ಣ ಬದಲಾವಣೆಗಳು ಭವಿಷ್ಯದಲ್ಲಿ ನಮಗೆ ಉತ್ತಮ ಫಲಗಳನ್ನು ಕೊಡುತ್ತದೆ. ಮಂಡಿ ನೋವು ಒಮ್ಮೆ ಬಂತೆಂದರೆ ದಿನ, ವಾರ, ತಿಂಗಳೆನ್ನದೆ ದೇಹದಲ್ಲಿ ಟಿಕಾಣಿ ಹೂಡಿದರೆ ಅದು ಆರ್ಥ್ರೈಟಿಸ್, ಆಸ್ಟಿಯೋ ಆರ್ಥರೈಟಿಸ್, ಆಸ್ಟಿಯೋಪೋರೋಸಿಸ್ ಎಂಬ ಇನ್ನಿತರ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇವೆಲ್ಲವುಗಳಿಂದ ಮುಕ್ತಿ ಪಡೆಯಬೇಕಾದರೆ ಮಗುವಾಗಿದ್ದಾಗಿನಿಂದ ಕ್ಯಾಲ್ಸಿಯಂ ಯುಕ್ತ ಆಹಾರಗಳನ್ನು ಸೇವಿಸುವುದು ಉತ್ತಮ.

ಪರಿಹಾರಗಳು
ನಿಮ್ಮ ಕಾಲಿನ ಮಂಡಿ ಭಾಗದಲ್ಲಿ ಮಾಂಸಖಂಡ ಅಥವಾ ಮೂಳೆ ಕಟ್ಟು ಹಾನಿಯಾಗಿದ್ದರೆ ಅಥವಾ ಮೂಳೆ ದುರ್ಬಲ ಗೊಂಡಿದ್ದರೆ, ನಿಮಗೆ ಮಂಡಿ ನೋವು ಕಾಣಿಸಬಹುದು. ಈ ರೀತಿಯ ಸಮಸ್ಯೆ ಮೂರು ಅಥವಾ ನಾಲ್ಕು ದಿನಗಳಿಗಿಂತ ಹೆಚ್ಚಿದ್ದರೆ ಅಥವಾ ದಿನಕಳೆದಂತೆ ಮಂಡಿ ನೋವು ಜಾಸ್ತಿ ಆದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಒಂದು ವೇಳೆ ನೀವು ಕಾಲಿಗೆ ಸಣ್ಣ ಗಾಯ ಮಾಡಿ ಕೊಂಡಿದ್ದರೆ, ನಿಮ್ಮ ಮನೆಯ ಮದ್ದು ಗಳಿಂದಲೇ ಯಾವುದೇ ಮಾತ್ರೆಗಳು ಇಲ್ಲದೆ ಬಗೆಹರಿಸಿ ಕೊಳ್ಳಬಹುದು.

ಕೋಲ್ಡ್ ಟ್ರೀಟ್ಮೆಂಟ್
ಇದು ಸಾಮಾನ್ಯವಾಗಿ ಆಟಗಾರರು ಬಿದ್ದು ನೋವು ಮಾಡಿಕೊಂಡಾಗ ನೋವಿರುವ ಜಾಗಕ್ಕೆ ಐಸ್ ಇಟ್ಟು ನೋವನ್ನು ಶಮನ ಮಾಡಲು ಸಹಜವಾಗಿ ಮಾಡುವ ಪ್ರಕ್ರಿಯೆ. ತಜ್ಞರು ಹೇಳುವ ಪ್ರಕಾರ ನೋವು ಉಂಟಾದ ಮೊದಲ 48 ಗಂಟೆಗಳಲ್ಲಿ ಈ ರೀತಿಯ ಕೋಲ್ಡ್ ಟ್ರೀಟ್ಮೆಂಟ್ ನೋವಾದ ಭಾಗ ಊದಿಕೊಳ್ಳುವುದನ್ನು ತಡೆಯುತ್ತದೆ.

ನೋವಿಗೆ ಬಿಸಿ ಶಾಖ
ಇದು ಸಾಮಾನ್ಯವಾಗಿ ಹಳೆಯ ನೋವು ಮತ್ತೆ ಮರುಕಳಿಸಿದಾಗ ಅಥವಾ ಅತಿಯಾದ ಕೆಲಸ ಮಾಡಿದಾಗ ಉಂಟಾಗುವ ನೋವಿಗೆ ಶೀಘ್ರ ಶಮನಕ್ಕಾಗಿ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಗೆ ಸಾಮಾನ್ಯವಾಗಿ ಬಿಸಿಮಾಡಿದ ಎಳ್ಳು ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸ್ವಲ್ಪ ಅರಿಶಿನದೊಂದಿಗೆ ಉಪಯೋಗಿಸುತ್ತಾರೆ.

ನೈಸರ್ಗಿಕ ನೋವು ನಿವಾರಕಗಳ ಉಪಯೋಗ
ಕೆಲವೊಮ್ಮೆ ನಮ್ಮ ಅಡಿಗೆ ಮನೆಯ ವಸ್ತುಗಳು ನಮಗೆ ಆರೋಗ್ಯದ ದೃಷ್ಟಿಯಿಂದ ಮಾಂತ್ರಿಕ ರೀತಿಯಲ್ಲಿ ಬಹಳ ಒಳ್ಳೆಯ ಸಹಾಯ ಮಾಡುತ್ತವೆ. ಅದರಲ್ಲೂ ಕೆಲವೊಂದು ವಸ್ತುಗಳು ನಮ್ಮ ದೇಹದ ದೀರ್ಘಕಾಲದ ನೋವುಗಳನ್ನು ಸಹ ಗುಣಪಡಿಸುತ್ತವೆ. ಆರೋಗ್ಯ ತಜ್ಞರು ಹೇಳುವ ಪ್ರಕಾರ ಅಧಿಕ ಕ್ಯಾಲ್ಸಿಯಂ ಹೊಂದಿರುವ ಬೀಜಗಳು ದೇಹದ ಮೂಳೆಗಳ ಆರೋಗ್ಯಕ್ಕೆ ಬಹಳ ಸಹಕಾರಿ. ಅವುಗಳೆಂದರೆ ಎಳ್ಳು, ಅಗಸೆ ಬೀಜಗಳು, ವಾಲ್ನಟ್ ಗಳು ಜೊತೆಗೆ ಆಮ್ಲ ಸಹ ಮೂಳೆ ಮತ್ತು ಕೀಲುಗಳ ಆರೋಗ್ಯಕ್ಕೆ ಸಹಕಾರಿ. ನೀವು ಇನ್ನೂ ಮುಂದುವರಿದು ಬೇಕಾದರೆ ಗಿಲೋ ಜಾತಿಯ ಕಾಂಡಗಳನ್ನು ಜಿಗಿಯಬಹುದು ಅಥವಾ ಒಣಗಿಸಿದ ಗಿಲೋ ಕಾಂಡಗಳನ್ನು ಪುಡಿಯ ರೂಪದಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಸೇವಿಸಬಹುದು. ಅದೂ ಅಲ್ಲದೆ ಮಾರುಕಟ್ಟೆಯಲ್ಲಿ ಗಿಲೋ ಮಾತ್ರೆಗಳೂ ಸಹ ಲಭ್ಯವಿವೆ.

ಅರಿಶಿನ
ನಾವು ಅಡುಗೆಗೆ ಬಳಸುವ ಅರಿಶಿನ ಕೂಡ ನೋವನ್ನು ಶಮನ ಮಾಡುವ ಗುಣ ಲಕ್ಷಣಗಳನ್ನು ಹೊಂದಿದೆ. ಅರಿಶಿನವನ್ನು ಬಿಸಿಯಾದ ಹಾಲಿನೊಂದಿಗೆ ಸೇವಿಸಿದರೆ, ಕೀಳು ನೋವು ಸಂಧಿವಾತದಂತಹ ಸಮಸ್ಯೆಗಳು ದೂರಾಗುತ್ತವೆ. ಇನ್ನೊಂದು ವಿಧಾನಗಳೆಂದರೆ, ಪ್ರತಿನಿತ್ಯ ಅಡುಗೆಗೆ ಬಳಸುವ ಒಂದೆರಡು ಚಮಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್‌ನಂತೆ ತಯಾರಿಸಿಕೊಂಡು ನೋವಿದ್ದ ಕಡೆ ದಿನಕ್ಕೆರಡು ಬಾರಿ ಹಚ್ಚಿ ಹಾಗೂ ಮೆಲ್ಲನೇ ಮಸಾಜ್ ಮಾಡಿಕೊಂಡು ಹಾಗೆಯೇ ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ಅರ್ಧ ಗಂಟೆ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ನೋವು ಕಡಿಮೆಯಾಗುತ್ತದೆ.
ಮೊಣಕಾಲು ನೋವು ಕಡಿಮೆ ಮಾಡುವ ಯೋಗಾಸನಗಳು

ಓಮದ ಕಾಳಿನ ಪೇಸ್ಟ್
ಸ್ವಲ್ಪ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಚೆನ್ನಾಗಿ ಅರೆದು ಪೇಸ್ಟ್‌ನಂತೆ ಮಾಡಿ ಈ ಮಿಶ್ರಣವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ. ಅಷ್ಟೇ ಅಲ್ಲದೇ ಒಂದರಿಂದ ಎರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಜೇನುತುಪ್ಪದ ಜತೆ ರಾತ್ರಿ ಸೇವಿಸಿದರೆ ಮಂಡಿ ಊತ , ನೋವು ಕಡಿಮೆಯಾಗುತ್ತದೆ.

ನೆನೆಸಿದ ಮೆಂತ್ಯ ಕಾಳುಗಳು
ಕೆಲವರಿಗೆ ಚಳಿಗಾಲ ಬಂತೆಂದರೆ ಸಾಕು ಮಂಡಿ ನೋವು ಅವರನ್ನು ಹುಡುಕಿಕೊಂಡು ಬರುತ್ತದೆ ಅಂತಹವರು ಇಡೀ ರಾತ್ರಿ ನೆನೆಸಿದ ಮೆಂತ್ಯ ಕಾಳುಗಳನ್ನು ಬೆಳಗಿನ ಖಾಲಿಹೊಟ್ಟೆಯಲ್ಲಿ ಸೇವಿಸಬಹುದು ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಶುಂಠಿ
ಇನ್ನು ಶುಂಠಿಯಲ್ಲಿ ಆಂಟಿ – ಇನ್ಫಾಮೇಟರಿ ಗುಣಲಕ್ಷಣಗಳಿದ್ದು ನೋವನ್ನು ಶಮನ ಮಾಡುವ ಶಕ್ತಿಯನ್ನು ಹೊಂದಿದೆ. ಶುಂಠಿ ಎಣ್ಣೆ, ಶುಂಠಿಯಲ್ಲಿ ತಯಾರು ಮಾಡಿದ ಟೀ , ಮತ್ತು ಬಿಸಿಯಾದ ಹಾಲಿನೊಂದಿಗೆ ಶುಂಠಿಯ ಉಪಯೋಗ ಬಹಳ ಪರಿಣಾಮಕಾರಿ.

ನಿತ್ಯ ಪೂಜಿಸುವ ತುಳಸಿ
ನಾವು ಪ್ರತಿನಿತ್ಯ ಪೂಜಿಸುವ ತುಳಸಿ ಗಿಡದ ಎಲೆಗಳು ಸಹ ಮನುಷ್ಯನ ದೇಹದ ನೋವುಗಳಿಗೆ ಒಳ್ಳೆಯ ಔಷಧಿ ಎಂದು ಸಾಬೀತಾಗಿದೆ. ತುಳಸಿ ಎಲೆಗಳಲ್ಲಿ ಆಂಟಿ – ರುಮ್ಯಾಟಿಕ್ ಗುಣಲಕ್ಷಣಗಳಿದ್ದು, ಕೀಲುನೋವು ಗಳಂತಹ ಕಾಯಿಲೆಗಳಿಗೆ ಇದು ರಾಮಬಾಣವಾಗಿ ಸಹಕಾರಿಯಾಗುತ್ತದೆ ಜೊತೆಗೆ ಇದರಲ್ಲಿ ಆಂಟಿ – ಸ್ಪಾಸ್ಮೊಡಿಕ್ ಗುಣ ಲಕ್ಷಣಗಳಿದ್ದು ಇದು ಮನುಷ್ಯನ ದೇಹದ ಮಾಂಸಖಂಡಗಳ ಸೆಳೆತಗಳಿಗೆ ಔಷಧಿ ಆಗುತ್ತದೆ. ಆದ್ದರಿಂದ ತುಳಸಿಯನ್ನು ಆರ್ಥ್ರೈಟಿಸ್ ಕೀಲುನೋವು ತರಹದ ಕಾಯಿಲೆಗಳಿಗೆ ದೇಹದ ಹೊರಭಾಗದಿಂದ ತುಳಸಿ ರಸದ ಮೂಲಕ ಉಪಶಮನ ನೀಡಬಹುದು.

ದ್ರಾಕ್ಷಿ ಹಣ್ಣುಗಳ ಪ್ರತಿನಿತ್ಯದ ಸೇವನೆ
ಟೆಕ್ಸಾಸ್ ಮಹಿಳಾ ವಿಶ್ವವಿದ್ಯಾಲಯ ನಡೆಸಿದ ಇತ್ತೀಚಿನ ಒಂದು ಅಧ್ಯಯನದಲ್ಲಿ ದ್ರಾಕ್ಷಿ ಹಣ್ಣುಗಳ ಪ್ರತಿನಿತ್ಯದ ಸೇವನೆ ಮಂಡಿ ನೋವಿಗೆ ಬಹಳ ಪರಿಣಾಮಕಾರಿ ಆಗಿದೆಯಂತೆ. ಇದಕ್ಕೆ ಕಾರಣ ದ್ರಾಕ್ಷಿ ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದ್ದು, ಪಾಲಿಫಿನಾಲ್ ಅಂಶ ಕೂಡ ಇದರಲ್ಲಿ ಹೆಚ್ಚಾಗಿಯೇ ಇದ್ದು ದೇಹದ ಅಂಗಾಂಗಳ ಚಲನೆಗೆ ಬಹಳ ಸಹಕಾರಿಯಂತೆ. ಆದ್ದರಿಂದಲೇ ದ್ರಾಕ್ಷಿ ಹಣ್ಣನ್ನು ಆಸ್ಟಿಯೋ ಆರ್ಥರೈಟಿಸ್ ರೋಗಲಕ್ಷಣಗಳಿಗೆ ಮನೆಮದ್ದಾಗಿ ಉಪಯೋಗಿಸುತ್ತಾರೆ.

error: Content is protected !!