ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ಲು ಪಾವತಿಸಲು ಮನವಿ

19/10/2020

ಮಡಿಕೇರಿ ಅ.19 : ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಕೂಡಲೇ ಬಿಲ್ಲು ಪಾವತಿಸುವಂತೆ ಕೋರಿದೆ. ಅನಿವಾರ್ಯ ಕಾರಣಗಳಿಂದ ವಿದ್ಯುತ್ ಬಿಲ್ಲು ಬಾಕಿ ಇರುವ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ. ಆದ್ದರಿಂದ ವಿದ್ಯುತ್ ಕಡಿತ ತಪ್ಪಿಸುವ ಸಲುವಾಗಿ ಬಾಕಿ ಇರುವ ಬಿಲ್ಲು ಪಾವತಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಕೋರಿದ್ದಾರೆ.