ಕೋವಿಡ್ ಸೋಂಕಿಗೆ ಕೊಡಗಿನಲ್ಲಿ ಇಬ್ಬರು ವೃದ್ಧರು ಬಲಿ

19/10/2020

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ವಿರಾಜಪೇಟೆ ತಾಲ್ಲೂಕು ಹಳ್ಳಿಗಟ್ಟು ಗ್ರಾಮದ ನಿವಾಸಿ 73 ವರ್ಷದ ವೃದ್ಧ ಹಾಗೂ ಮಡಿಕೇರಿ ತಾಲ್ಲೂಕು ಹಾಕತ್ತೂರು ಗ್ರಾಮದ ನಿವಾಸಿ 83 ವರ್ಷದ ವೃದ್ಧ ಮೃತ ವ್ಯಕ್ತಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 63 ಕ್ಕೆ ಏರಿಕೆಯಾದಂತ್ತಾಗಿದೆ. ಚೇತರಿಸಿಕೊಂಡ 77 ಸೋಂಕಿತರನ್ನು ಇಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.