ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣು : ಹಟ್ಟಿಹೊಳೆಯಲ್ಲಿ ಘಟನೆ

19/10/2020

ಮಡಿಕೇರಿ ಅ.19 : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಟ್ಟಿಹೊಳೆ ಸಮೀಪದ ಹಾಡಗೇರಿ ಪೈಸಾರಿಯಲ್ಲಿ ನಡೆದಿದೆ. ಹಾಡಗೇರಿಯ ಮಂಜು(29) ಎಂಬಾತನ ಮೃತದೇಹ ಮನೆಯ ಪಕ್ಕದ ಕಾಫಿ ತೋಟದ ಮರವೊಂದರಲ್ಲಿ ಪತ್ತೆಯಾಗಿದೆ.
ಮಾದಾಪುರ ವಕ್ರ್ಸ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಮಂಜು ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಸ್ಥಳಕ್ಕೆ ಠಾಣಾಧಿಕಾರಿ ವಿರೂಪಾಕ್ಷ, ಎಎಸ್‍ಐ ಪೊನ್ನಪ್ಪ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.