ಕಡಿಮೆಯಾಗುತ್ತಿದೆ ಕೋವಿಡ್ ಪಾಸಿಟಿವ್ ದರ

ನವದೆಹಲಿ ಅ.20 : ಸತತ ನಾಲ್ಕನೇ ದಿನವೂ ಕೋವಿಡ್ ಪಾಸಿಟಿವ್ ದರ ಶೇಕಡಾ 8ಕ್ಕಿಂತಲೂ ಕಡಿಮೆಯಾಗಿದ್ದು, ಸೋಂಕು ಹರಡುವಿಕೆ ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ದೇಶದಲ್ಲಿ ಸತತವಾಗಿ ಪಾಸಿಟಿವ್ ದರ ಶೇ. 7.94 ರಷ್ಟಿದ್ದು, ಕುಸಿತ ಮುಂದುವರೆದಿದೆ.ದೇಶಾದ್ಯಂತ ಉನ್ನತ ಮಟ್ಟದ ಸಮಗ್ರ ಪರೀಕ್ಷೆಯಿಂದ ಇದು ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪಾಸಿಟಿವ್ ದರದಲ್ಲಿನ ಕುಸಿತವೂ ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣವನ್ನು ತೋರಿಸುತ್ತಿದೆ. ಸೋಂಕುನ್ನು ಬೇಗನೆ ಗುರುತಿಸಿ, ಸೂಕ್ತ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವುದರಿಂದ ಮರಣ ಪ್ರಮಾಣದಲ್ಲೂ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.
ಈವರೆಗೂ ಕೊರೋನಾವೈರಸ್ ಸೋಂಕು ಪತ್ತೆಯಾಗಿ ನಡೆಸಲಾಗಿರುವ ಒಟ್ಟಾರೇ, ಪರೀಕ್ಷೆಗಳ ಸಂಖ್ಯೆ 9.5 ಕೋಟಿಯನ್ನು ದಾಟಿದೆ.ಅಕ್ಟೋಬರ್ ಮೂರನೇ ವಾರದಲ್ಲಿ ಸರಾಸರಿ ದೈನಂದಿನ ಪಾಸಿಟಿವ್ ದರ ಪ್ರಮಾಣವು ಶೇಕಡಾ 6.13 ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದು ಕೇಂದ್ರ ಸರ್ಕಾರದ ಯಶಸ್ವಿ ಸೋಂಕು ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ತಾಂತ್ರಿಕ ಪರಿಣಾಮವಾಗಿದೆ. ಇದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಅನುಸರಿಸುತ್ತಿವೆ ಎಂದು ಒತ್ತಿ ಹೇಳಿದೆ.
