ಮುಖ್ಯಮಂತ್ರಿ ಚಂದ್ರುಗೆ ಮುರುಘಾಶ್ರೀ ಪ್ರಶಸ್ತಿ

20/10/2020

ಚಿತ್ರದುರ್ಗ ಅ.20 : ರಂಗಭೂಮಿ, ಸಿನಿಮಾ ಕ್ಷೇತ್ರದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸೇರಿ ಐವರನ್ನು ಈ ಸಾಲಿನ “ಮುರುಘಾಶ್ರೀ ಪ್ರಶಸ್ತಿ” ಗೆ ಆಯ್ಕೆ ಮಡಲಾಗಿದೆ.
ಅಕ್ಟೋಬರ್ 24ರಂದು ಚಿತ್ರದುರ್ಗದ ಮುರುಘಾ ಮಠದ “ಶರಣ ಸಂಸ್ಕೃತಿ ಉತ್ಸವ”ದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು “ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಟ್ ಅಮುಖ್ಯಮಂತ್ರಿ ಚಂದ್ರು ಸೇರಿ ಐವರಿಗೆ ಈ ಸಾಲಿನ ಮುರುಘಾಶ್ರೀ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿದ್ದೇವೆ” ಎಂದರು.
ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ, ಹುಲುಸೂರು ಗುರುಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ಮದ್ಯಪಾನ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿರುವ ಸ್ವರ್ಣ ಭಟ್ ಹಾಗೂ ಧರ್ಮದರ್ಶಿ ಎಸ್.ಷಣ್ಮುಖಪ್ಪ ಅವರುಗಳು ಈ ಗೌರವಕ್ಕೆ ಪಾತ್ರವಾಗಿದ್ದಾರೆ.