ಇಬ್ಬರು ಯುವಕರು ಸಮುದ್ರ ಪಾಲು

October 20, 2020

ಕಾಪು ಅ.20 : ಬೆಂಗಳೂರಿನಿಂದ ಕಾಪು ಕಡಲತೀರಕ್ಕೆ ಬಂದಿದ್ದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಕಾರ್ತಿಕ್ (22) ಮತ್ತು ರೂಪೇಶ್ (21) ಎಂದು ಗುರುತಿಸಲಾಗಿದೆ.
ಇತರ ಮೂವರು ಯುವಕರಾದ ದಿಲೀಪ್, ಲಿಖಿತ್ ಮತ್ತು ಜಯಂತ್ ರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಜೀವರಕ್ಷಕರು ಎಚ್ಚರಿಕೆ ನೀಡಿದ್ದರೂ, ಯುವಕರು ಸಮುದ್ರಕ್ಕೆ ಇಳಿದಿದ್ದರು. ಪ್ರಬಲ ಅಲೆಗಳ ಸೆಳೆತದಿಂದ ಎಲ್ಲರೂ ಸಮುದ್ರದಲ್ಲಿ ಮುಳುಗಿದ್ದಾರೆ. ಪೈಕಿ ಮೂವರನ್ನು ರಕ್ಷಿಸಲಾಗಿದೆ.

error: Content is protected !!