ಕಾವೇರಿ ಮಕ್ಕಳ ಗೃಹದ ಮಕ್ಕಳಿಗೆ ರೆಡ್ ಕ್ರಾಸ್ ನಿಂದ ಕೊಡುಗೆ

20/10/2020

ಮಡಿಕೇರಿ ಅ.20 : ಕೊಡಗು ಜಿಲ್ಲಾ ರೆಡ್ ಕ್ರಾಸ್ ವತಿಯಿಂದ ನಗರದ ಕಾವೇರಿ ಮಕ್ಕಳ ಗೃಹದಲ್ಲಿನ ಮಕ್ಕಳಿಗೆ ಸ್ಯಾನಿಟೈಸರ್, ಸೋಪ್, ಮಾಸ್ಕ್ ಗಳನ್ನು ನೀಡಲಾಯಿತು.
ಮಡಿಕೇರಿಯಲ್ಲಿನ ಜಿಲ್ಲಾ ಶಿಶುಕಲ್ಯಾಣ ಸಂಸ್ಥೆಯ ಕಾವೇರಿ ಮಕ್ಕಳ ಗೃಹಕ್ಕೆ ಭೇಟಿ ನೀಡಿದ ರೆಡ್ ಕ್ರಾಸ್ ಪ್ರಮುಖರು ಅಲ್ಲಿನ 22 ಮಕ್ಕಳಿಗೆ ಸೋಪ್ , ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ವಾಶ್ ನೀಡಿದರು.
ಈ ಸಂದರ್ಭ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಕಾರ್ಯದರ್ಶಿ ಮುರಳಿ, ಉಪಾಧ್ಯಕ್ಷ ಅನಿಲ್ ಹೆಚ್.ಟಿ., ನಿರ್ದೇಶಕ ಎಂ.ಧನಂಜಯ್, ಪೆÇನ್ನಮ್ಮ ಮತ್ತು ದರ್ಶನ್ ಬೋಪಯ್ಯ ಹಾಜರಿದ್ದರು.