ಪ್ರೀತಿಯ ಪ್ರವಾದಿ : ON LINE ಕಾರ್ಯಕ್ರಮಕ್ಕೆ ಚಾಲನೆ

ಮಡಿಕೇರಿ ಅ.20 : ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ. ಅ) ರವರ ಜನ್ಮದಿನದ ಅಂಗವಾಗಿ ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ “ಪ್ರೀತಿಯ ಪ್ರವಾದಿ” ಎಂಬ ON LINE ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹನ್ನೆರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪ್ರವಾದಿಯವರ ಜೀವನದ ಸಮಗ್ರ ಹಾಗೂ ಸಂಪೂರ್ಣ ವಿಷಯಗಳನ್ನೊಳಗೊಂಡ ಧಾರ್ಮಿಕ ತರಗತಿಗಳು, ಭಾಷಣ, ಪ್ರವಾದಿ ಕೀರ್ತನೆಗಳು ಹಾಗೂ ಹತ್ತು ಹಲವು ವಿಧಗಳಲ್ಲಿ ಪ್ರತಿದಿನ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಜಿಲ್ಲೆಯ ಧಾರ್ಮಿಕ ವಿದ್ವಾಂಸರು ಹಾಗೂ ಪಂಡಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .
ಉದ್ಘಾಟನಾ ಕಾರ್ಯಕ್ರಮವನ್ನು ಸಯ್ಯಿದ್ ಶಮೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕೇರಳ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ .ಎಸ್ ಎಸ್.ಎಫ್ ಜಿಸಿಸಿ ಕೊಡಗು ಅಧ್ಯಕ್ಷರಾದ ಹುಸೈನ್ ಫೈಝಿ ವಹಿಸಿದ್ದರು. ಜಿಸಿಸಿ ಕೊಡಗು ದಹ್ವಾ ವಿಭಾಗದ ಅಧ್ಯಕ್ಷರಾದ ಸಿದ್ದೀಕ್ ಬಾಖವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್.ಕೆ .ಎಸ್ ಎಸ್.ಎಫ್ ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ಯವರು, ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಕಲಿಸಿಕೊಟ್ಟ ನೀತಿ-ನ್ಯಾಯ, ಸಹೋದರತ್ವ ಹಾಗೂ ಸಮಾನತೆಯ ಸಂದೇಶವನ್ನು ಎತ್ತಿಹಿಡಿಯಬೇಕೆಂದು ತಿಳಿಸಿದರು. ಪ್ರವಾದಿಯವರ ಮಾರ್ಗದರ್ಶನ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕೆಂಬ ಉತ್ತಮ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್ ಸ್ವಾಗತಿಸಿದರು. ಜಿಸಿಸಿ ಉಪಾಧ್ಯಕ್ಷರಾದ ಝೈನುದ್ಧೀನ್ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶಫೀಕ್ ನೆಲ್ಲಿಯಹುದಿಕೇರಿ, ಸಂಚಾಲಕರಾದ ಯಹ್ಯಾ ಕೊಡ್ಲಿಪೇಟೆ,ಸದಸ್ಯರುಗಳಾದ ರಶೀದ್ ಇ ಪಿ ತ್ಯಾಗತ್ತೂರ್, ಬಶೀರ್ ಚೇರಂಭಾಣೆ, ಕಮರುದ್ದೀನ್ ವಿರಾಜಪೇಟೆ, ಜಿಸಿಸಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್ ವಿರಾಜಪೇಟೆ, ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಬಜೆಗುಂಡಿ,ಇಬ್ರಾಹಿಂ ದಾರಿಮಿ ಬಹರೈನ್, ಹಮೀದ್ ಮುಸ್ಲಿಯಾರ್ ಕತಾರ್, ಲತೀಫ್ ಕಡಂಗ ದುಬೈ ಮತ್ತು ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಹಲವು ನಾಯಕರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಅಶ್ಫಾಕ್ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿ, ಜಿಸಿಸಿ ಕೋಶಾಧಿಕಾರಿ ಅಬ್ದುಲ್ ರಝಾಕ್ ಫೈಝಿ ವಂದಿಸಿದರು.