ಆರ್‍ಎಸ್‍ಎಸ್ ವಿಜಯದಶಮಿಗೆ ಗಣ್ಯರಿಗಿಲ್ಲ ಆಹ್ವಾನ

October 21, 2020

ನಾಗ್ಪುರ ಅ.21 : ಸಧ್ಯ ಎಲ್ಲೆಲ್ಲೂ ವ್ಯಾಪಿಸಿರುವ ಕೊರೋನಾ ಸೋಂಕಿನ ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ನಿರ್ಧಾರವನ್ನು ಕೈಬಿಟ್ಟಿದೆ.
ಈ ವರ್ಷ ಹಬ್ಬದ ಸಂದರ್ಭ ಆರ್‍ಎಸ್‍ಎಸ್ ಸರಸಂಗ ಚಾಲಕ ಮೋಹನ್ ಭಾಗವತ್ ಮಾತ್ರವೇ ಭಾಗವಹಿಸಿ ಭಾಷಣ ಮಾಡಲಿದ್ದಾರೆ ಹೊರತು ಬೇರಾವ ಮುಖ್ಯ ಅತಿಥಿಗಳಿರುವುದಿಲ್ಲ ಎಂದು ಸಂಘ ತೀರ್ಮಾನಿಸಿದೆ.
ಆರ್‍ಎಸ್‍ಎಸ್ ಮುಖ್ಯಸ್ಥರ ವಿಜಯದಶಮಿ ಬಾಷಣವನ್ನು ಸಂಸ್ಥೆ ಒಂದು ಪ್ರಮುಖ ಕಾರ್ಯಕ್ರಮವಾಗಿ ಪರಿಗಣಿಸಲಾಗಿದೆ ಏಕೆಂದರೆ ಅವರ ಭಾಷಣದ ಸಮಯದಲ್ಲಿ ಭವಿಷ್ಯದ ಯೋಜನೆಗಳು ಮತ್ತು ದೃಷ್ಟಿಕೋನವನ್ನು ಎಲ್ಲರಿಗೆ ತಿಳಿಸಲಾಗುತ್ತದೆ. ಈ ಹಂತದಿಂದಲೇ ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಅನೇಕ ವಿಷಯಗಳ ಬಗ್ಗೆ ಆರ್‍ಎಸ್‍ಎಸ್ ನಿಲುವು ತಾಳುತ್ತದೆ.
ಆರ್‍ಎಸ್‍ಎಸ್‍ನ ಹಿರಿಯ ಮುಖಂಡರ ಪ್ರಕಾರ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಳಿ ಅಂಗಿ ಮತ್ತು ‘ಖಾಕಿ’ ಪ್ಯಾಂಟ್‍ಗಳನ್ನು ಧರಿಸಿದ ಸ್ವಯಂ ಸೇವಕರಿಂದ ತುಂಬಿರುವ ಮೈದಾನ ಈ ಬಾರಿ 50 ಕ್ಕಿಂತ ಹೆಚ್ಚಿನ ಜನರನ್ನು ಕಾಣುವುದಿಲ್ಲ.
ಆರ್‍ಎಸ್‍ಎಸ್ ಮುಖ್ಯಸ್ಥರ ಭಾಷಣವನ್ನು ಅ.25 ರಂದು ಬೆಳಿಗ್ಗೆ 8 ಗಂಟೆಗೆ ನಿಗದಿಪಡಿಸಲಾಗಿದೆ.

error: Content is protected !!