ರುಚಿ ರುಚಿಯಾದ ಕಾಜು ಕರಿ ಮಾಡುವ ವಿಧಾನ

21/10/2020

ಬೇಕಾಗುವ ಸಾಮಾಗ್ರಿ : ಬೆಣ್ಣೆ : 2 ಚಮಚ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ : 1 ಚಮಚ, ಈರುಳ್ಳಿ ಪೇಸ್ಟ್ : 3 ಚಮಚ, ಗೋಡಂಬಿ ಪೇಸ್ಟ್ : 2 ಚಮಚ, ಗಸಗಸೆ ಪೇಸ್ಟ್ : 1 ಚಮಚ, ತೆಂಗಿನ ತುರಿ ಪೇಸ್ಟ್ : 2 ಚಮಚ, ಕೆಂಪು ಮೆಣಸಿನ ಪುಡಿ : 2 ಚಮಚ, ಗರಂ ಮಸಾಲಾ ಪುಡಿ : 2 ಚಮಚ, ಅರಿಶಿನ ಪುಡಿ : 1 ಚಮಚ, ಕ್ರೀಮ್ : 3 ಚಮಚ, ಹಾಲು : 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಅಗತ್ಯಕ್ಕೆ ತಕ್ಕಷ್ಟು, ಗೋಡಂಬಿ : 1 ಕಪ್

ಮಾಡುವ ವಿಧಾನ: ಒಂದು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಈರುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಮೂರು ನಿಮಿಷಗಳ ಕಾಲ ಬಿಸಿ ಮಾಡಿದ ಮೇಲೆ ಗೋಡಂಬಿ, ಗೋಡಂಬಿ ಪೇಸ್ಟ್, ತೆಂಗಿನಕಾಯಿ ಪೇಸ್ಟ್ ಹಾಕಿ ಸರಿಯಾಗಿ ಮಿಕ್ಸ್ ಮಾಡಿ.

ನಂತ್ರ ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಅರಿಶಿನ ಪುಡಿ, ತಾಜಾ ಕೆನೆ, ಹಾಲು, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಎರಡು ನಿಮಿಷಗಳ ಕಾಲ ಬಿಸಿ ಮಾಡಿ ಪಕ್ಕಕ್ಕಿಡಿ. ನಂತ್ರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಗೋಡಂಬಿ ಮಿಶ್ರಣವನ್ನು ಅದಕ್ಕೆ ಹಾಕಿ ಗ್ರೇವಿ ತಯಾರಿಸಿ.