ಮುಖದ ಸೌಂದರ್ಯಕ್ಕೆ ‘ಟೊಮೆಟೊ ಹಣ್ಣಿನ’ ಫೇಸ್ ಪ್ಯಾಕ್

21/10/2020

ಟೊಮೆಟೊ ಬಳಸಿಕೊಂಡು ಹಲವಾರು ರೀತಿಯ ಅಡುಗೆ ತಯಾರಿಸುತ್ತೇವೆ. ಆದರೆ ಇದೇ ಟೊಮೆಟೊ ಬಳಸಿ ತ್ವಚೆಯ ಆರೈಕೆ ಮಾಡಬಹುದು. ಟೊಮೆಟೊದಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇರುವ ಕಾರಣದಿಂದ, ತ್ವಚೆಯ ಮೇಲಿನ ವಯಸ್ಸಾಗುವ ಲಕ್ಷಣಗಳನ್ನು ಹೋಗಲಾಡಿಸುತ್ತದೆ.

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್ : ಒಂದು ಟೊಮೆಟೊದ ತಿರುಳು ತೆಗೆದು ಅದಕ್ಕೆ ಎರಡು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆರಸ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ. ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್ ಒಣ ಚರ್ಮ ಇರುವವರಿಗೆ ತುಂಬಾ ಒಳ್ಳೆಯದು. ಟೊಮೆಟೊ ಮತ್ತು ಜೇನುತುಪ್ಪದಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ಪೋಷಣೆ ನೀಡುತ್ತದೆ.

ಟೊಮೆಟೊ ಮತ್ತು ಆಲಿವ್ ತೈಲದ ಫೇಸ್ ಮಾಸ್ಕ್ : ಯಾವಾಗಲೂ ಚರ್ಮದಲ್ಲಿ ಮೊಡವೆ ಕಾಣಿಸಿಕೊಳ್ಳುತ್ತಾ ಇದೆ ಎನ್ನುವವರಿಗೆ ಆಲಿವ್ ತೈಲ ಮತ್ತು ಟೊಮೆಟೊದ ಮಾಸ್ಕ್ ತುಂಬಾ ಒಳ್ಳೆಯದು. ಒಂದು ಟೊಮೆಟೊ ತೆಗೆದುಕೊಂಡು ಅದರ ತಿರುಳು ತೆಗೆಯಿರಿ. ಇದಕ್ಕೆ ಒಂದು ಚಮಚ ಆಲಿವ್ ತೈಲ ಮತ್ತು ಒಂದು ಚಮಚ ಜೋಜೋಬಾ ತೈಲ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಹದವಾದ ಪೇಸ್ಟ್ ಮಾಡಿಕೊಂಡ ಬಳಿಕ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಇದನ್ನು ಮುಚ್ಚಿಕೊಳ್ಳಿ. ಹತ್ತು ನಿಮಿಷ ಬಿಟ್ಟು ನೀರಿನಿಂದ ತೊಳೆಯರಿ.ಟೊಮೆಟೊ ಮತ್ತು ಆಲಿವ್ ತೈಲದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಚರ್ಮದಲ್ಲಿ ಮೊಡವೆ ಮೂಡುವುದನ್ನು ಕಡಿಮೆ ಮಾಡುವುದು.

ಟೊಮೆಟೊ ಮತ್ತು ಮೊಸರಿನ ಫೇಸ್ ಮಾಸ್ಕ್ : ಚರ್ಮದ ಬಣ್ಣ ಉತ್ತಮಪಡಿಸಲು ಟೊಮೆಟೊ ಮತ್ತು ಮೊಸರಿನ ಮಾಸ್ಕ್ ತುಂಬಾ ಒಳ್ಳೆಯದು. ಒಂದು ಟೊಮೆಟೊ ತಿರುಳು ಮತ್ತು ಅದಕ್ಕೆ ಸ್ವಲ್ಪ ಮೊಸರು ಹಾಕಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಳಿ ಚಿಟಿಕೆ ಅರಶಿನ ಹಾಕಿ. ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿ. ನೈಸರ್ಗಿಕವಾಗಿ ಚರ್ಮ ಬಿಳಿಯಾಗಲು ಪ್ರತೀ ದಿನ ಇದನ್ನು ಬಳಸಿ.