ಸುಂಟಿಕೊಪ್ಪ ಶ್ರೀಚಾಮುಂಡೇಶ್ವರಿ ದೇವಾಲಯಕ್ಕೆ 25 ಸೆಂಟ್ ಜಾಗ ದಾನ ನೀಡಿದವರಿಗೆ ಸನ್ಮಾನ

October 21, 2020

ಸುಂಟಿಕೊಪ್ಪ ಅ.21: ಶ್ರೀಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ 25 ಸೆಂಟು ಜಾಗವನ್ನು ಉಚಿತವಾಗಿ ನೀಡಿದ ಗಣೇಶ್ ಮತ್ತು ಕುಟುಂಬದವರನ್ನು ಸನ್ಮಾನಿಸಿ ಗೌರಿಸಲಾಯಿತು.
ಶ್ರೀಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು ದೇವಸ್ಥಾನದ ಗಣೇಶ್ ಕುಟುಂಬದವರ ಪಾರ್ವತಮ್ಮ ಬಡಾವಣೆಯನ್ನು ಹೊಂದಿದ್ದು ದೇವಸ್ಥಾನ ಅಭಿವೃದ್ಧಿಗಾಗಿ 25 ಸೆಂಟು ಜಾಗವನ್ನು ದೇಣಿಗೆಯಾಗಿ ನೀಡಿದ್ದಾರೆ.
ನವರಾತ್ರಿಯ ವಿಶೇಷ ಪೂಜೆ ಹಿನ್ನಲೆ ಗಣೇಶ್ ಮತ್ತು ಕುಟುಂಬದವರನ್ನು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ವೈ.ಎಂ.ಕರುಂಬಯ್ಯ, ಸದಸ್ಯರಾದ ಆರ್.ರಮೇಶ್ ಪಿಳ್ಳೆ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆರ್ಚಕರಾದ ಮಂಜುನಾಥ್ ಉಡುಪ ಹಾಗೂ ಮುತ್ತಪ್ಪ ದೇವಸ್ಥಾನದ ಪೂಜಾರಿ ಶಿವರಾಮ್ (ಶಿವಮಣಿ) ನೀಡಿದರು.

error: Content is protected !!