ಕ್ಯಾನ್ಸರ್ ಗೆದ್ದಿದ್ದೇನೆ ಎಂದ ಸಂಜಯ್

22/10/2020

ಮಡಿಕೇರಿ ಅ.22 : ಮಹಾಮಾರಿ ಕ್ಯಾನ್ಸರ್ ಅನ್ನು ಸೋಲಿಸುವ ಮಾತನಾಡಿದ್ದ ಸುಮಾರು ಒಂದು ವಾರದ ನಂತರ, ಹಿರಿಯ ನಟ, ಕೆಜಿಎಫ್ ಚಾಪ್ಟರ್ 2 ಖ್ಯಾತಿಯ ಅಧೀರ ಸಂಜಯ್ ದತ್ ಅವರು ತಮ್ಮ ಪುತ್ರ ಶಹರಾನ್ ಜನ್ಮದಿನದಂದು ತಾವು ಕ್ಯಾನ್ಸರ್ ನಿಂದ ಗುಣಮುಖವಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ತಮ್ಮ ಆರೋಗ್ಯದ ಕುರಿತ ಅಪ್ ಡೇಟ್ ಬಗ್ಗೆ ಹೇಳಿಕೆಯನ್ನು ಹಂಚಿಕೊಳ್ಳಲು ದತ್ ತಮ್ಮ ಟ್ವಿಟ್ತರ್ ನಲ್ಲಿ ಬರೆದಿದ್ದು “ತಾನು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.. ಅವರು ಮತ್ತು ಅವರ ಕುಟುಂಬಕ್ಕೆ ಕಳೆದ ದಿನಗಳು ಎಷ್ಟು “ಕಷ್ಟಕರ” ಆಗಿದ್ದವು ಎಂದು ಹೇಳುವ ಮೂಲಕ ಅವರು ತನ್ನ ಬರಹ ಪ್ರಾರಂಭಿಸುತ್ತಾರೆ.
“ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಆದರೆ ದೇವರು ತನ್ನ ಪ್ರೀತಿಯ ಭಕ್ತರಿಗೆ ಕಠಿಣ ಪರೀಕ್ಷೆಗಳನ್ನು ನೀಡುತ್ತಾನೆ. ಮತ್ತು ಇಂದು, ನನ್ನ ಮಗನ ಜನ್ಮದಿನದಂದು, ವಿಜಯಶಾಲಿಯಾಗಿ ಹೊರಬರಲು ನನಗೆ ಸಂತೋಷವಾಗಿದೆ ಈ ಯುದ್ಧದ ಗೆಲುವು ನಾನು ಅವರಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ”
“ಮುನ್ನಾಭಾಯಿ ಎಂಬಿಬಿಎಸ್” ನಟ ಸಂಜಯ್ ದತ್ ತನ್ನ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ “ಅಚಲವಾದ ನಂಬಿಕೆ, ಅಭಿಮಾನ ಮತ್ತು ಬೆಂಬಲಕ್ಕಾಗಿ” ಧನ್ಯವಾದಗಳನ್ನು ಅರ್ಪಿಸಿದರು.