‘ನಂದಿಸದಿರಿ ನಂದಾದೀಪ’ ಕೃತಿ ಬಿಡುಗಡೆ : ನಂಬಿಕೆಯಿಂದ ಕಾರ್ಯ ಸಿದ್ದಿಸಿಕೊಳ್ಳಬಹುದು : ಪ್ರೊ. ಜ್ಞಾನೇಶ್ ಅಭಿಪ್ರಾಯ

22/10/2020

ಮಡಿಕೇರಿ ಅ. 22 : ಯಾವುದೇ ವಿಷಯದಲ್ಲಿ ನಂಬಿಕೆ ಮುಖ್ಯವಾಗಿದ್ದು ನಂಬಿಕೆಯಿಂದ ಕಾರ್ಯಸಿದ್ದಿಸಿಕೊಳ್ಳಬಹುದು ಎಂದು ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಪ್ರೊ. ಜ್ಞಾನೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿ ರಚಿಸಿರುವ ‘ನಂದಿಸದಿರಿ ನಂದಾದೀಪ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದೇವರಲ್ಲಿ ನಂಬಿಕೆ ಇದ್ದರೆ ಮಾತ್ರ ದೇವರು ಒಲಿಯುತ್ತಾನೆ. ಆಶ್ರಮದ ಸ್ವಾಮಿಗಳ ತ್ಯಾಗಮಯ ಜೀವನ ಎಲ್ಲಾರಿಗೆ ಆದರ್ಶ ಎಂದು ಹೇಳಿದರು.
ಶ್ರೀ ಯೋಗೇಶ್ವರಾನಂದ ಸ್ವಾಮಿ ಮಾತನಾಡಿ, ಇಂದು ವಿಜ್ಜಾನ ಅತ್ಯಂತ ಮುಂದುವರಿದಿದ್ದು ಪ್ರಕೃತಿಗೆ ವಿರುದ್ಧವಾದ ಕ್ರಿಯೆಗಳು ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ ನಾವು ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಎ.ಎಸ್.ಐ ಕುಶಾಲಪ್ಪ ಗೌಡ, ಡಾ.ಸಾಯಿಗೀತಾ, ಪ್ರೊ. ಅನಿಲ್, ಪ್ರೊ. ರೇಖಾ ಹಾಗೂ ಆಶ್ರಮದ ಟ್ರಸ್ಟಿ ಪ್ರಣವಿ ಉಪಸ್ಥಿತರಿದ್ದರು.
ನವರಾತ್ರಿ ಪ್ರಯುಕ್ತ ಗಣಹೋಮ, ಭಜನಾ ಕಾರ್ಯಕ್ರಮ ನಡೆಯಿತು.