ಬಾದಾಮಿ ಹಾಲಿನ ಆರೋಗ್ಯ ಪ್ರಯೋಜನಗಳು

22/10/2020

ಬಾದಾಮಿ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಪ್ರೋಟೀನ್, ಜೀವಸತ್ವ ಹಾಗೂ ಕ್ಯಾಲ್ಸಿಯಂ ಮತ್ತು ಇತರ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಬಾದಾಮಿ ಹಾಲು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ನೀವು ಈ ಹಾಲನ್ನು ದೈನಂದಿನ ಆಹಾರದ ಭಾಗವಾಗಿಸಬಹುದು. ಬಾದಾಮಿ ಹಾಲು ತುಂಬಾ ಕಡಿಮೆ ಕ್ಯಾಲೋರಿಗಳು ಇದರಲ್ಲಿರುವುದರಿಂದ , ಇದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಬಾದಾಮಿ ಹಾಲಿನಲ್ಲಿ 1 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು ಮೂರು ಗ್ರಾಂ ಕೊಬ್ಬು ಇರುವುದರಿಂದ ಹಸುವಿನ ಹಾಲಿಗಿಂತ ಹೆಚ್ಚು ಉತ್ತಮ ಎಂದು ಪರಿಗಣಿಸಲಾಗಿದೆ.

ತಜ್ಞರ ಪ್ರಕಾರ, ದೇಹದಲ್ಲಿ ರಕ್ತ ಹೆಪ್ಪು ಗಟ್ಟುವ ಅಪಾಯವನ್ನು ಬಾದಾಮಿ ಹಾಲು ಕಡಿಮೆ ಮಾಡುತ್ತದೆ. ಕಬ್ಬಿಣ ಅಂಶ ಹೆಚ್ಚಾಗಿರುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.

ಸ್ನಾಯುಗಳನ್ನು ಬಲಪಡಿಸಲು ವಿಶೇಷವಾಗಿ ಬಾದಾಮಿ ಹಾಲನ್ನು ಸೇವಿಸಬೇಕು. ನಿಮಗೆ ಉತ್ತಮ ಕ್ಯಾಲ್ಸಿಯಂ ದೊರೆಯುವುದಲ್ಲದೇ, ಸಂಧಿವಾತ, ಹಲ್ಲಿಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿರಿಸುತ್ತದೆ.ಕಣ್ಣಿನ ದೃಷ್ಟಿಗೂ ಹೆಚ್ಚು ಉಪಯುಕ್ತ ಎಂದು ಹೇಳಬಹುದು. ಇದರಲ್ಲಿ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಒತ್ತಡ ಹಾಗೂ ದೃಷ್ಟಿಯ ಪೊರೈಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿ ದಿನ ಬಾದಾಮಿ ಹಾಲು ಸೇವಿಸುವುದರಿಂದ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ.

ಬಾದಾಮಿ ಹಾಲಿನಲ್ಲಿರುವ ಕೊಬ್ಬಿನಾಮ್ಲಗಳು ಕೂದಲನ್ನು ಮೃದುವಾಗಿಸುತ್ತವೆ. ಮತ್ತು ಹಾಲಿನಲ್ಲಿರುವ ವಿಟಮಿನ್ ಇ ಕೂದಲು ಉದರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರತಿ ದಿನ ಬಾದಾಮಿ ಹಾಲು ಕುಡಿಯುವುದರಿಂದ ತಲೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಆರೋಗ್ಯಕರ ಹೃದಯಕ್ಕೆ ಬಾದಾಮಿ ಹಾಲು ಒಳ್ಳೆಯದು . ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಾದಾಮಿ ಹಾಲಿನಲ್ಲಿರುವ ವಿಟಮಿನ್ ಇ ಹೃದಯ ಆರೋಗ್ಯಕ್ಕೆ ಒಳ್ಳೆಯದು.

ಚರ್ಮವನ್ನು ಸುಂದರ ಹಾಗೂ ಆರೋಗ್ಯಕರ ವಾಗಿಡಲು ಪ್ರತಿ ದಿನ ಬಾದಾಮಿ ಹಾಲು ಸೇವಿಸುವುದು ಉತ್ತಮ. ವಿವಿಧ ರೀತಿಯ ಜೀವ ಸತ್ವಗಳು ಹಾಗೂ ಖನಿಜಗಳು ಇರುವುದಕ್ಕೆ ಕಾರಣ ಎಂದು ಹೇಳಬಹುದು. ಬಾದಾಮಿ ಹಾಲಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಹಾನಿಗೊಳಗಾದ ಚರ್ಮವನ್ನು ಗುಣಪಡಿಸಲು ನೆರವಾಗುತ್ತದೆ.

ಬಾದಾಮಿಯಲ್ಲಿ ಕಡಿಮೆ ಸಕ್ಕರೆ ಅಂಶವಿರುವುದರಿಂದ ಪ್ರೋಟೀನ್ ನಿಂದ ಸಮೃದ್ಧವಾಗಿದೆ.ಬಾದಾಮಿ ಹಾಲನ್ನು ಉಪಯೋಗಿಸುವುದು ಹೇಗೆ
ಬಾದಾಮಿ ಹಾಲನ್ನು ಕಾಫಿ, ಟೀ ತಯಾರಿಸಲು ಬಳಸಬಹುದು.ವಯಸ್ಕರಿಗೆ ಹಾಗೂ ಮಕ್ಕಳಿಗೆ ಡೆಜರ್ಟ್ ತಯಾರಿಸಲು ಬಾದಾಮಿ ಹಾಲನ್ನು ಬಳಸಲಾಗುತ್ತದೆ.ಜಿಮ್ ನಲ್ಲಿ ವರ್ಕೌಟ್ ಮಾಡುವವವರು ಎನರ್ಜಿ ಡ್ರಿಂಕ್ ಆಗಿ ಬಾದಾಮಿ ಹಾಲನ್ನು ಉಪಯೋಗಿಸಬಹುದು
ಸೇಬು ಅಥವಾ ಬಾಳೆ ಸ್ಮೂಥಿಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ.