ಬಾಯಲ್ಲಿ ನೀರೂರಿಸುವ ಗುಲಾಬ್‌ ಜಾಮೂನ್‌ ಮಾಡುವ ವಿಧಾನ

October 22, 2020

ಬೇಕಾಗುವ ಸಾಮಾಗ್ರಿಗಳು : 50 ಗ್ರಾಂ ಖೋವಾ, 75 ಗ್ರಾಂ ಮೈದಾ, 200 ಗ್ರಾಂ ಸಕ್ಕರೆ, 250 ಗ್ರಾಂ. ಒಳ್ಳೆ ಕ್ರೀಂ. 4-5 ಚಮಚ ಪುಡಿ ಸಕ್ಕರೆ, ಗುಲಾಬಿ ನೀರು, 1 ಹೋಳು ನಿಂಬೆ ಹಣ್ಣು, ಕರೆಯಲು ಬಾಣಲೆ ಹಾಗೂ ಎಣ್ಣೆ.

ಮಾಡುವ ವಿಧಾನ : ಮೊದಲು ಸಕ್ಕರೆ ನೀರು ಬೆರೆಸಿ ಚೆನ್ನಾಗಿ ಕುದಿಸಿ, ಪಾಕ ಸಿದ್ಧಮಾಡಿಕೊಳ್ಳಬೇಕು. ಖೋವಾ ಹಾಗೂ ಮೈದಾ ಸೇರಿಸಿ ಚೆನ್ನಾಗಿ ನಾದಬೇಕು. ಒಂದಿಷ್ಟು ತುಪ್ಪ ಬೆರೆಸಿ ಕಲೆಸಿದರೆ, ಗಂಟು ಇಲ್ಲದಂತೆ ಹಿಟ್ಟು ಅಚ್ಚುಕಟ್ಟಾಗಿರುತ್ತದೆ. ಆನಂತರ ದೊಡ್ಡ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಳ್ಳಬೇಕು.

ಕಾದ ಎಣ್ಣೆಯಲ್ಲಿ ಗುಲಾಬಿ ಬಣ್ಣ ಬರುವಂತೆ ಜಾಮೂನನ್ನು ಕರೆಯಬೇಕು. ನಂತರ ಅದನ್ನು ಪಾಕಕ್ಕೆ ಹಾಕಿಡಬೇಕು. 5-6 ನಿಮಿಷದ ನಂತರ ಸ್ವಲ್ಪ ಹೊತ್ತು ಹದವಾದ ಉರಿಯ ಒಲೆಯ ಮೇಲಿಟ್ಟು ತುಸು ಬೆಚ್ಚಗೆ ಮಾಡಿ ಕೆಳಗಿಳಿಸಬೇಕು.

ಇಷ್ಟಾದ ಬಳಿಕ ಪುಡಿ ಸಕ್ಕರೆಗೆ ಕ್ರೀಂ ಮತ್ತು ಗುಲಾಬಿ ನೀರು, ನಿಂಬೆ ರಸ ಸೇರಿಸಿ ಮಿಶ್ರಣ ಮಾಡಬೇಕು. ಅಷ್ಟರಲ್ಲಿ ಪಾಕದೊಂದಿಗೆ ಚೆನ್ನಾಗಿ ಉಬ್ಬಿದ ಜಾಮೂನುಗಳನ್ನು ಕ್ರೀಮಿರುವ ಪಾತ್ರೆಗೆ ಸ್ಥಳಾಂತರಿಸಿ, ಗುಲಾಬಿ ದಳದಿಂದ ಅಲಂಕರಿಸಿದರೆ, ಗುಲಾಬ್‌ ಜಾಮೂನ್‌ ತಿನ್ನಲು ರೆಡಿ.

error: Content is protected !!