ಅರೆಭಾಷೆ ನಿಘಂಟು ರಚನೆ : ಸಂಶೋಧನಾ ಸಹಾಯಕರಿಂದ ಅರ್ಜಿ ಆಹ್ವಾನ

22/10/2020

ಮಡಿಕೇರಿ ಅ.22 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅರೆಭಾಷೆ ನಿಘಂಟು ರಚನೆಗಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕು ಹಾಗೂ ಕಾಸರಗೋಡು ಜಿಲ್ಲೆಯ ಬಂದಡ್ಕ, ಅಡೂರು ಈ ಪ್ರದೇಶಗಳಲ್ಲಿ ಕ್ಷೇತ್ರ ಕಾರ್ಯ ನಡೆಸಲು ಅರೆಭಾಷೆ ಮಾತನಾಡಲು ಬರುವ, ಸೇವಾ ಮನೋಭಾವ ಹೊಂದಿರುವ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರಾದ ಯುವಕ ಯುವತಿಯರು ತಾತ್ಕಾಲಿಕ ನೆಲೆಯಲ್ಲಿ ಸಂಶೋಧನಾ ಸಹಾಯಕರಾಗಿ ದುಡಿಯಲು ಬೇಕಾಗಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಹಿತಿ ಕಲೆಹಾಕುವಲ್ಲಿ ತರಬೇತಿ ವ್ಯವಸ್ಥೆ ಮಾಡಲಾಗುವುದು ಮತ್ತು ಸೂಕ್ತ ಸಂಭಾವನೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ನವೆಂಬರ್, 4 ಕೊನೆಯ ದಿನವಾಗಿದೆ. ಸ್ವ-ವಿವರದ ಅರ್ಜಿ ಮತ್ತು ಸೂಕ್ತದಾಖಲೆಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ. 08272 arebaseacademy@gmail.com ವಿಳಾಸಕ್ಕೆ ನೀಡಬೇಕಾಗಿ ಕೋರಿದೆ.