ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕೃತಿಗಳ ಆಹ್ವಾನ

22/10/2020

ಮಡಿಕೇರಿ ಅ.22 : ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಮುಕ್ತ ಪ್ರಕಟಣಾ ಮಾಲೆ ಹೆಸರಿನಲ್ಲಿ ಅಪ್ರಕಟಿತ ಕೃತಿಗಳನ್ನು ಪ್ರಕಟಣೆಗಾಗಿ ಆಹ್ವಾನಿಸಲಾಗಿದೆ.
ಆಸಕ್ತ ಲೇಖಕರು ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಆತ್ಮಕತೆ, ನಿಘಂಟು, ಈವರೆಗೆ ಬಾರದೇ ಇರುವ ಜ್ಞಾನಶಾಖೆಯ ಬಗ್ಗೆ ಪ್ರಕಟವಾಗಬಹುದಾದ ಜ್ಞಾನನಿಧಿ ಎನಿಸಬಹುದಾದ ಶಾಸ್ತ್ರಜ್ಞಾನ ಹೆಚ್ಚಿಸುವ 100 ಪುಟಗಳಿಂದ 300 ಪುಟಗಳವರೆಗಿನ ವಿಶೇಷ ಕೃತಿಗಳು ಪ್ರಕಟಣೆಗೆ ಸಿದ್ದವಿದ್ದಲ್ಲಿ ಅಂತಹ ಕೃತಿಗಳ್ನು ಆಹ್ವಾನಿಸಲಾಗಿದೆ. ಆಸಕ್ತರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://karnatakasahithyaacademy.org ಇಂದ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ಕರಿಯಪ್ಪ ಅವರು ತಿಳಿಸಿದ್ದಾರೆ.