ಕೊಡಗು ಜಿಲ್ಲಾ ಅಂಚೆ ಇಲಾಖೆಯಿಂದ ಕೋವಿಡ್ ಜಾಗೃತಿ

22/10/2020

ಮಡಿಕೇರಿ ಅ.22 : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಅಂಚೆ ಇಲಾಖೆ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಎಲ್ಲಾ ರೀತಿಯ ಪತ್ರಗಳ ಮೇಲೆ ಕೊರೋನಾ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
“ಪದೇ ಪದೇ ಕೈ ತೊಳೆಯಿರಿ, ಮಾಸ್ಕ್ ನ್ನು ಸರಿಯಾಗಿ ಧರಿಸಿ, ಅಂತರ ಕಾಯ್ದುಕೊಳ್ಳಿ, ಕೊರೋನಾದಿಂದ ಸುರಕ್ಷಿತವಾಗಿರಿ” ಎಂದು ಪತ್ರಗಳ ಮೇಲೆ ಮುದ್ರಿಸಲಾಗಿದೆ.
ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಜಾಗೃತಿ ಬ್ಯಾನರ್‍ಗಳನ್ನು ಪ್ರದರ್ಶಿಸಲಾಗುತ್ತಿದೆ. ಜನರು ಕೂಡ ಕೋವಿಡ್ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೊಡಗು ಜಿಲ್ಲಾ ಅಂಚೆ ಅಧೀಕ್ಷಕ ಹೆಚ್.ಜೆ.ಸೋಮಯ್ಯ ಮನವಿ ಮಾಡಿದ್ದಾರೆ.