ಅನ್ವಾರುಲ್ ಹುದಾ ಸೌದಿ ರಾಷ್ಟೀಯ ಸಮಿತಿ ಅಧ್ಯಕ್ಷರಾಗಿ: ಹಂಸ ಮುಸ್ಲಿಯಾರ್ ಆಯ್ಕೆ

22/10/2020

ಮಡಿಕೇರಿ ಅ. 22 : ಜಿಲ್ಲೆಯ ಪ್ರತಿಷ್ಠಿತ ಮತ-ಲೌಕಿಕ ಸಮನ್ವಯ ವಿದ್ಯಾಭ್ಯಾಸ ಸಂಸ್ಥೆ ವಿರಾಜಪೇಟೆ ಅನ್ವಾರುಲ್ ಹುದಾ,ಇದರ ಸೌದಿ ಅರೇಬಿಯಾದ ಅನಿವಾಸಿ ಸಮಿತಿಗಳ , ಅನ್ವಾರುಲ್ ಹುದಾ ಸೌದಿ ರಾಷ್ಟ್ರಿಯ ಸಮಿತಿಯನ್ನು ರಚಿಸಲಾಯಿತು.
ಅನ್ವಾರುಲ್ ಹುದಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್’ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಚೇರಂಬಾಣೆ ಪ್ರಧಾನ ಕಾರ್ಯದರ್ಶಿ, ಹಂಝ ಹಾಜಿ ವಿರಾಜಪೇಟೆಯವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ‌
ಸಂಘಟನಾ ಕಾರ್ಯದರ್ಶಿಯಾಗಿ ಶಂಸುದ್ದೀನ್ ಆಝಾದ್ ನಗರ, ಹಾಗೂ ಮುಸ್ತಫಾ ಝೈನಿ ಕಂಬಿಬಾಣೆ ಕೋಓರ್ಡಿನೇಟರ್ ಆಗಿರುವ ರಾಷ್ಟ್ರೀಯ ಸಮಿತಿಯನ್ನು ಸಂಸ್ಥೆಯ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಸಯ್ಯಿದ್ ಶಾಫಿ ಬಾಹಲವೀ ಮದೀನಾ ಮುನವ್ವರರವರು ಅಧಿಕೃತವಾಗಿ ಘೋಷಣೆ ಮಾಡಿದರು.
ಸಲಹಾ ಸಮಿತಿ ಚೇರ್ಮನ್ ಆಗಿ ಅಬ್ದುಲ್ ಜಲೀಲ್ ಸಖಾಫಿ ಕಡಂಗ ಹಾಗೂ ಸಲಹಾ ಸದಸ್ಯರಾಗಿ ಸಯ್ಯಿದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ, ಸಯ್ಯಿದ್ ಮುಹಮ್ಮದ್ ರಫೀಖ್ ಮಾಲ್ದಾರೆ, ಯೂಸುಫ್ ಸಅದಿ ಅಯ್ಯಂಗೇರಿ, ಅಬೂಬಕರ್ ಸಅದಿ ಎಮ್ಮೆಮಾಡು, ಮುಹಮ್ಮದ್ ಸಖಾಫಿ ಕೊಟ್ಟಮುಡಿ, ಅಬ್ದುರ್ರಹ್ಮಾನ್ ಹಾಜಿ ಅಯ್ಯಂಗೇರಿ, ಸಿದ್ದೀಕ್ ಝುಹ್ರಿ ಅಯ್ಯಂಗೇರಿ, ಆಬಿದ್ ಕಂಡಕ್ಕರೆ, ಸಲಾಂ ಕುಂಜಿಲ ಆಯ್ಕೆಯಾದರು‌.
ಆಬಿದ್ ಝುಹ್ರೀ ಚೇರಂಬಾಣೆ, ಮುಸ್ತಫಾ ಕಡಂಗ, ಶಂಸುದ್ದೀನ್ ಮುಸ್ಲಿಯಾರ್ ಚಾಮಿಯಾಲ, ಅಬ್ದುಸ್ಸಮದ್ ಪೊನ್ನಂಪೇಟೆ ಸಮಿತಿಯ ಉಪಾಧ್ಯಕ್ಷರಾಗಿಯೂ ಸಅದ್ ಮುಸ್ಲಿಯಾರ್ ಕೊಂಡಂಗೇರಿ, ರಿಯಾಝ್ ಚಿಟ್ಟಡೆ, ಆದಂ ಕಂಡಕ್ಕರೆ, ನಿಝಾಂ ಅಂಬಟ್ಟಿ ಕಾರ್ಯದರ್ಶಿಗಳಾಗಿಯೂ ರಫೀಖ್ ಕೊಳಕೇರಿ ಮಕ್ಕ, ಫಾರೂಖ್ ಮುಸ್ಲಿಯಾರ್ ಮದೀನಾ, ರಫೀಖ್ ನೆಲ್ಯಹುದಿಕೇರಿ ಜಿದ್ದ, ಹಂಝ ಕೊಟ್ಟಮುಡಿ ಯಾಂಬು, ಹಂಝ ಮುಸ್ಲಿಯಾರ್ ಅಲ್ ರಾಸ್, ಮುಸ್ತಫಾ ಬುರೈದ, ರಿಯಾಝ್ ಎಮ್ಮೆಮಾಡು ನಜ್ರಾನ್, ಉಮರ್ ಕುಂಜಿಲ ಅಬ್’ಹಾ, ಬಾರಿಕೆ ಸಲಾಂ ಕುಂಜಿಲ ರಿಯಾದ್, ಸ್ವಾದಿಖ್ ಶನಿವಾರಸಂತೆ ರಿಯಾದ್, ಮುಸ್ತಫಾ ಕೊಮ್ಮೆತ್ತೋಡು ಲಿಝಾನ್, ಹಮೀದ್ ಬೇತ್ರಿ ತಬೂಖ್, ಇಸ್ಹಾಖ್ ಮಿಸ್ಬಾಹಿ ಆಝಾದ್ ನಗರ ದಮ್ಮಾಂ, ಅಬೂಬಕರ್ ಎಮ್ಮೆಮಾಡು ದಮ್ಮಾಂ, ಅಬ್ದುರ್ರಹ್ಮಾನ್ ಕುಂಜಿಲ ಅಲ್ ಹಸ್ಸಾ, ಅಬ್ದುಲ್ ಸಲಾಂ ಪೊಯಕ್ಕರ ಅಲ್ ಹಸ್ಸಾ, ನಸೀರ್ ಗುಂಡಿಕೆರೆ ರಿಯಾದ್ ಸಮಿತಿ ಸದಸ್ಯರಾಗಿ ಆಯ್ಕೆಯಾದರು.