ಸಿದ್ದಾಪುರದಲ್ಲಿ ರೈತ ಸಂವಾದ ಕಾರ್ಯಕ್ರಮ : ರೈತರಿಗೆ ಮರದ ಹಕ್ಕು ನೀಡುವಂತೆ ರೈತ ಸಂಘ ಆಗ್ರಹ

ವಿರಾಜಪೇಟೆ:ಆ:22: ಬೆಳೆಗಾರ ತಾನು ಹೊಂದಿರುವ ತೋಟದ ಪರಿಸರದಲ್ಲಿ ಬೆಳೆದ ಬೆಲೆಬಾಳುವ ಮರಗಳನ್ನು ತನ್ನ ಉಪಯೋಗಕ್ಕೆ ಬಳಸುವ ಹಕ್ಕು ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯ ಮಾಡಿತು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕ ಮತ್ತು ಸಿದ್ದಾಪುರ ಹೊಬಳಿ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮ ನಡೆಯಿತು. ರೈತ ಸಂಘದ ಇಟ್ಟೀರ ಸಭಿತ ಭೀಮಯ್ಯ ಮತ್ತು ರೈತ ಮಹಿಳಾ ಸದಸ್ಯರು ದೀಪ ಬೆಳೆಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಕಾನೂನು ಸಲಹೆಗಾರರಾದ ಹೇಮಚಂದ್ರ ಅವರು ರೈತನು ತನ್ನ ಪೂರ್ವಜರಿಂದ ಬಳುವಳಿಯಾಗಿ ಬಂದ ತೋಟದಲ್ಲಿ ಬೆಳೆದು ನಿಂತ ಬೆಲೆಬಾಳುವ ಮರಗಳನ್ನು ಪೊಷೀಶಿ ರಕ್ಷಣೆ ಮಾಡಿಕೊಂಡು ಬಂದ ಸಂಧರ್ಭದಲ್ಲಿ ಕೆಲವು ಮರಗಳ್ಳರು ತೋಟದ ಮಾಲೀಕರ ಕಣ್ಣಿಗೆ ಮಣ್ಣರೆಚಿ ಮರಗಳನ್ನು ಕಳ್ಳತನ ಮಾಡಿ ಹಿಂದಿರುಗುತ್ತಾರೆ ಇಲಾಖೆಯು ಇಂತಹ ಪ್ರಕರಣಗಳನ್ನು ಗಾಂಭಿರವಾಗಿ ಪರಿಗಣಿಸದೆ ಮರಗಳ್ಳರಿಗೆ ರಕ್ಷಣೆ ನೀಡುತ್ತಿರುವುದು ಯಕ್ಷ ಪ್ರಶ್ನೆಯಾಗಿದೆ.ಪ್ರಕರಣಕ್ಕೆ ಸಾಕ್ಷೈಗಳು ದೊರಕದೆ ಕಳ್ಳರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ.ಅರಣ್ಯ ಇಲಾಖೆಯು ನಿಗದಿಗೊಳಿಸಿದ ಮರವನ್ನು ಮಾರಾಟ ಮಾಡಿ ಬರುವ ಹಣವನ್ನು ರೈತರಿಗೆ ನೀಡುವಂತಾಗಬೇಕು ತೆರಿಗೆ ಹಣವನ್ನು ಸರ್ಕಾರವು ಪಡೆದುಕೊಳ್ಳುವಂತಾಗಬೇಕು ಇದರಿಂದ ರೈತರಿಗೆ ಮರದ ಹಕ್ಕು ಲಭಿಸಿದಂತಾಗುತ್ತದೆ ಎಂದು ಹೇಳಿದರು.
ರೈತ ಸಂಘದ ಪ್ರಧಾನ ಕಾರ್ಯಧರ್ಶಿ ಸುಜಾಯ್ ಬೋಪಯ್ಯ ಅವರು ಮಾತನಾಡಿ ಇಂದು ಭಾರತದ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಇಳಿಕೆ ಕಂಡಿದೆ. ಅದರೆ ಬಂಡವಾಳ ಶಾಹಿಗಳು ತಮ್ಮ ಜೇಬು ತುಂಬಿಸಿಕೊಳ್ಳುತಿದ್ದಾರೆ. ದೇಶದ ಅರ್ಥಿಕ ಅರ್ಥ ವ್ಯೆವಸ್ಥೆಯಲ್ಲಿ ರೈತರ ಪಾಲು ಬಹುದೊಡ್ಡ ಪ್ರಮಾಣದಲ್ಲಿದೆ. ಅದರೆ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರಕದಿರುವುದು ವಿಷಾದನೀಯ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸಂಪೂರ್ಣ ಸ್ಪಂದನೆ ನೀಡಿದಲ್ಲಿ ಬಹುತೇಕ ಸಮಸ್ಯೆಗಳು ಇತ್ಯರ್ಥವಾಗುತ್ತದೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಸುಂಟಿಕೊಪ್ಪದ ನಿವಾಸಿ ಮತ್ತು ರೈತರಾದ ದೀಪಕ್ ಬಸವರಾಜ್ ಮತ್ತು ಕಿರಣ್ ಬಸವರಾಜ್ ಅವರ ತೋಟದಲ್ಲಿ ನಡೆದ ಮರ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಮರಗಳ್ಳರನ್ನು ಧೈರ್ಯವಾಗಿ ಎದುರಿಸಿದ ಬಸವರಾಜ್ ಸಹೋದರರ ಕಾರ್ಯ ಶ್ಲಾಘನೀಯ. ಅರಣ್ಯ ಇಲಾಖೆ ಮತ್ತು ಪೊಲೀಸು ಇಲಾಖೆಯು ನಿರ್ಲಕ್ಷ ವಹಿಸಿದೆ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ ಮರಗಳ್ಳರೀಗೆ ತಕ್ಕ ಶಿಕ್ಷೆ ವಿಧಿಸುವಂತಾಗಬೇಕು.ಜಿಲ್ಲೆಯಲ್ಲಿ ಜಮ್ಮ ಭೂಮಿ ಹಿಡುವಳಿದಾರರು ಮತ್ತು ಎಲ್ಲಾ ವರ್ಗದ ಕಾಫಿ ಬೆಳೆಗಾರರು ಹಲವು ವರ್ಷಗಳಿಂದ ಬಂದೂಕು ಪರವಾನಿಗೆ ಸಲ್ಲಿಸಿದ ಅರ್ಜಿಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಡತಗಳ ಮಧ್ಯೆ ಉಳಿದುಕೊಂಡಿದೆ ಅರ್ಜಿಗಳನ್ನು ಪರಿಶೀಲನೆ ಮಾಡಿ ಶೀಘ್ರವಾಗಿ ಇತ್ಯರ್ಥಪಡಿಸಬೇಕು.ಸ್ವಾಮಿನಾಥನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರಬೇಕು ವರದಿಯಲ್ಲಿ ಉಲ್ಲೇಖ ಮಾಡಿದಂತೆ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೋಳಿಸಬೇಕು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಶಾಖೆ ವತಿಯಿಂದ ಸರ್ಕಾರವನ್ನು ಒತ್ತಾಯ ಪಡಿಸುತ್ತಿದ್ದೇನೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಮ್ಮತ್ತಿ ಹೊಬಳಿಯ ಅಧ್ಯಕ್ಷ ಪ್ರವೀಣ್ ಬೊಪಯ್ಯ ಅವರು ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಕೊಡಗರಹಳ್ಳಿ ನಿವಾಸಿ ಸಿದ್ದಮ್ಮ ತೋಟದ ಮಾಲೀಕರಾದ ದೀಪಕ್ ಬಸವರಾಜ್ ಮತ್ತು ಕಿರಣ್ ಬಸವರಾಜ್ ಅವರಿಗೆ ಕೊಡಗಿನ ಶೂರ ರೈತ ಬಿರುದು ಮತ್ತು ಒಡಿಕತ್ತಿಯನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮತ್ತು ಅಮ್ಮತ್ತಿ ಹೊಬಳಿಯ ರೈತ ಸಂಘದ ಉಪಧ್ಯಕ್ಷರಾದ ಹರೀಶ್ ಸೊಮಯ್ಯ ಉಪಸ್ಥಿತರಿದ್ದರು. ಅಮ್ಮತ್ತಿ ಸಿದ್ದಾಪುರ ಹೊಬಳಿಯ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


