ಬಿಜೆಪಿಯಿಂದ ಉಚಿತ ಕೊರೋನಾ ಲಸಿಕೆ

23/10/2020

ಪಾಟ್ನಾ ಅ.23 : ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆಯನ್ನು ನೀಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಿಜೆಪಿ ಹಿರಿಯ ಮುಖಂಡ ಭೂಪೇಂದರ್ ಯಾದವ್, ಅಶ್ವಿನಿ ಚೌಹೆ, ಪ್ರಮೋದ್ ಕುಮಾರ್, ನಿತ್ಯಾನಂದ ರೇ ಅವರು ಉಪಸ್ಥಿತರಿದ್ದರು.
ಪ್ರಣಾಳಿಕೆ ಬಿಡುಗಡೆಗೊಳಿಸಿರುವ ಬಿಜೆಪಿ, ಎಲ್ಲರಿಗೂ ಉಚಿಕ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆ, ರಾಜ್ಯ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುವುದಾಗಿ ತಿಳಿಸಿದೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ಎನ್’ಡಿಎ ಸರ್ಕಾರ ಉದಾಹರಣೆಯಾಗಿದೆ. ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ. ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತೀಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಪ್ರಣಾಳಿಕೆಯಲ್ಲಿ ಇದು ನಾವು ನೀಡುತ್ತಿರುವ ಮೊದಲ ಭರವಸೆಯಾಗಿದೆ.