ಅಳಿವಿನಂಚಿನಲ್ಲಿರುವ ಮಹಶೀರ್ ತಳಿಯ ಮೀನುಮರಿಗಳನ್ನು ಪಂಪಿನ ಕೆರೆಗೆ ದಾಸ್ತಾನು

23/10/2020

ಮಡಿಕೇರಿ ಅ.23 : ಪ್ರಸಕ್ತ(2020-21) ಸಾಲಿನ ದಸರಾ ಮಹೋತ್ಸವದ ಅಂಗವಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ದೇವರ ಮೀನು ಎಂದು ಪ್ರಸಿದ್ದಿ ಇರುವ, ಅಳಿವಿನಂಚಿನ ಮಹಶೀರ್ ತಳಿಯ ಬಲಿತ ಬಿತ್ತನೆ ಮೀನುಮರಿಗಳನ್ನು ಹಾರಂಗಿ ಮೀನುಮರಿ ಉತ್ಪಾದನಾ ಹಾಗೂ ಪಾಲನಾ ಕೇಂದ್ರದಲ್ಲಿ 2020-21ನೇ ಸಾಲಿನಲ್ಲಿ ಉತ್ಪಾದಿಸಿದ 2000 ಸಂಖ್ಯೆ ಮಹಶೀರ್ ಬಲಿತ ಬಿತ್ತನೆ ಮರಿಗಳನ್ನು ಶುಕ್ರವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೊಡಗು ಜಿಲ್ಲೆ ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿ ಸ್ನೇಹ ದರ್ಶನ್ ಸಿ., ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಎಸ್.ಎಂ.ಸಚಿನ್, ಮೀನುಗಾರಿಕೆ ಸಹಾಯಕ ನಿರ್ದೇಶಕರು ಹಾರಂಗಿ ಹಾಗೂ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ 1895ರಲ್ಲಿ ನಿರ್ಮಾಣಗೊಂಡಿರುವ ಮಡಿಕೇರಿಯ ಪಂಪಿನ ಕೆರೆಯಲ್ಲಿ ಮೀನು ಮರಿಗಳನ್ನು ದಾಸ್ತಾನು ಮಾಡಲಾಯಿತು.