ಸುಂಟಿಕೊಪ್ಪದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ : ಪೊಲೀಸರಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ

October 23, 2020

ಸುಂಟಿಕೊಪ್ಪ,ಅ.23: ಕೋವಿಡ್‍ನಿಂದ ಪಾರಾಗಬೇಕಾದರೆ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್‍ನಿಂದ ಪರಾಗುವಂತೆ ಸುಂಟಿಕೊಪ್ಪ ನೂತನ ಠಾಣಾಧಿಕಾರಿ ಬಿ.ಎಂ.ದಿಲೀಪ್ ಕುಮಾರ್ ಹೇಳಿದರು.
ಕೋವಿಡ್ ಜನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಂಟಿಕೊಪ್ಪ ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಕರೋನಾ ಮಹಾಮಾರಿಯ ಪ್ರಚಾರ ಫಲಕವನ್ನು ಅಳವಡಿಸಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದ ಬಿ.ಎಂ.ದಿಲೀಪ್ ಕುಮಾರ್ ವೈಯಕ್ತಿಕ ಆರೋಗ್ಯ ಹಾಗೂ ಕುಟುಂಬದವರ ಮಂದಿಯ ಸುರಕ್ಷತೆಯ ದಿಸೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕಿವಿಮಾತು ಹೇಳಿದರು.
ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ಜನತೆಗೆ ನಿರ್ಧಾಕ್ಷಣ್ಯವಾಗಿ ದಂಡ ವಿಧಿಸಲಾಗುವುದು. ದಂಡ ತೆರವುದನ್ನು ತಪ್ಪಿಸಿಕೊಳ್ಳಬೇಕಾದರೆ ಸಾರ್ವಜನಿಕರು ಕಡ್ಡಾಯವಾಗಿ ಮನೆಯಿಂದ ಹೊರಬರುವ ಸಂದರ್ಭ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕೆಂದರು.
ಈ ಸಂದರ್ಭ ಪೊಲೀಸ್ ಠಾಣಾಧಿಕಾರಿ ವೆಂಕಟರಮಣ, ಮುಖ್ಯಪೇದೆ ಸತೀಶ್, ಖಾದರ್, ಮಂಜುನಾಥ್, ಪೇದೆ ಸಂಪತ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಬಿಜೆಪಿ 2ನೇ ಬೂತ್ ಶಕ್ತಿ ಕೇಂದ್ರದ ಪ್ರಮುಖ್ ವಾಸು, ಹೊಸಕೋಟೆ ಬಿಜೆಪಿ 2ನೇ ಬೂತ್ ಶಕ್ತಿ ಕೇಂದ್ರದ ಪ್ರಮುಖ್ ದಿನೇಶ್, ಯುವಮೋರ್ಚಾ ಅಧ್ಯಕ್ಷ ವಿಘ್ನೇಶ್, ಶಕ್ತಿ ಕೇಂದ್ರದ ಸಹಪ್ರಮುಖ್ ಸಿ.ಸಿ.ಸುನೀಲ್ ವಾಹನ ಚಾಲಕರು ಆಟೋ ಚಾಲಕರು ಇದ್ದರು.