ಆರ್.ಎಸ್.ರೇಣುಕಾ ಗೆ ಪಿಚ್‍ಡಿ ಪದವಿ

23/10/2020

ಮಡಿಕೇರಿ ಅ.23 : ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್, ಸಹಕಾರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಆರ್.ಎಸ್.ರೇಣುಕಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್‍ಡಿ ಪದವಿ ದೊರೆತಿದೆ.
ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಡಾ.ಎ.ಆರ್.ವಿಶ್ವನಾಥ ಅವರ ಮಾರ್ಗದರ್ಶನದಲ್ಲಿ “ಆನ್ ಎಕಾನಾಮಿಕ್ ಅನಾಲಿಸಿಸ್ ಆಫ್ ವುಮೆನ್ಸ್ ಕೋ-ಆಪರೇಟಿವ್ ಬ್ಯಾಂಕ್ಸ್ ಇನ್ ಕರ್ನಾಟಕ: ಎ ಕಾಂಪಾರೇಟಿವ್ ಸ್ಟಡಿ ಆಫ್ ಮೈಸೂರು ಮತ್ತು ಮಂಡ್ಯ ಜಿಲ್ಲೆ” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದು, ನಿಗಧಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ಸುಮಾರು 15 ವರ್ಷಗಳಿಂದ ಕೆಐಸಿಎಂ ನಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಸ್ತುತ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.