ಮಡಿಕೇರಿ ಆ.22 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಅಂದಾಜು 45 ರಿಂದ 50 ವರ್ಷದ ಮಹಿಳೆಯಾಗಿದ್ದು, ಮೃತದೇಹದಲ್ಲಿ ಬಿಳಿಹರಳಿನ ಲೋಹದಂತಿರುವ ಒಂದು ಜೊತೆ ಓಲೆ, ಎರಡು ಕೈಗಳಲ್ಲಿ ಲೋಹದ ಬಳೆ, ಬಲಗೈನಲ್ಲಿ ಒಂದು ಲೋಹದ ಉಂಗುರ, ಕುತ್ತಿಗೆಯಲ್ಲಿ ಬಿಳಿದಾರದಲ್ಲಿ ಲಿಂಗ ಹಾಗೂ ಒಂದು ಬೀಗ ಕೀ ದೊರಕಿದೆ. ಮೃತ ಹೆಂಗಸಿನ ಬಗ್ಗೆ ಮಾಹಿತಿ ದೊರೆತಲ್ಲಿ ಕುಶಾಲನಗರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ 08276-278433, 08276-274400, 08272-229000 ಸಂಪರ್ಕಿಸಬಹುದಾಗಿದೆ.







