ಮಡಿಕೇರಿ ಜ.5 : ರಾಜಸ್ಥಾನದ ಮೌಂಟ್ ಅಬುವಿನಲ್ಲಿರುವ ಬ್ರಹ್ಮಕುಮಾರಿಸ್ ಪ್ರಧಾನ ಕಾರ್ಯಾಲಯಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಆದ್ಯಾತ್ಮದ ವಿಶೇಷ ದ್ಯಾನದಲ್ಲಿ ತಮ್ಮ ಬದುಕಿನ ಸುಂದರ ಕ್ಷಣವನ್ನು ಸ್ಮøತಿ ಮಾಡಿಕೊಂಡರು.
ನಂತರ ಜ್ಯೋತಿ ಬೆಳೆಗಿಸಿ ವಿಶ್ವಕ್ಕೆ ಆದ್ಯಾತ್ಮದ ಕೊಡುಗೆಯನ್ನು ನೀಡಿರುವ ಬ್ರಹ್ಮಕುಮಾರಿಸ್ ನ ಸೇವೆ ಮಹತ್ತರ. ವಿಶ್ವದಾದ್ಯಂತ ಹರಡಿರುವ ಈ ಶಾಖೆಯನ್ನು ಮಹಿಳೆಯರೇ ನಡೆಸುತ್ತಿರುವುದು ಶ್ಲಾಘನೀಯ. ವಿಶ್ವದ ಅತೀ ದೊಡ್ಡ ಸಂಸ್ಥೆಯಾಗಿ ಎಲ್ಲರಲ್ಲೂ ಸಕರಾತ್ಮಕವನ್ನು ತುಂಬುತ್ತಿದೆ ಎಂದು ಮನವರಿಕೆ ಮಾಡಿದರು.
ಈ ಸಂದರ್ಭ ರಾಜಸ್ಥಾನದ ಸಚಿವರು, ಬ್ರಹ್ಮಕುಮಾರಿ ಮುಖ್ಯ ಸಹೋದರ, ಸಹೋದರಿಯರು ಪಾಲ್ಗೊಂಡು ಈಶ್ವರಿಯ ಸನ್ಮಾನ ನೀಡಿ ಗೌರವಿಸಿದರು.
ಮುಂಜಾನೆ ದ್ಯಾನದ ಕೊಠಡಿಯಲ್ಲಿ ದ್ಯಾನ ಮಾಡಿ ಎಲ್ಲರೊಂದಿಗೆ ಬೆರೆತು ಬೆಳಗಿನ ಆದ್ಯಾತ್ಮದ ತರಗತಿಯಲ್ಲಿ ಭಾಗವಹಿಸಿ, ಗಿಡನೆಟ್ಟು ಎಲ್ಲರಿಗೂ ಶುಭಕೋರಿದರು.