ಹುದಿಕೇರಿ, NEWS DESK ಅ.5: ಹುದಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮೀದೆರಿರ ಸವಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೊಡವರ ಆಚಾರ-ವಿಚಾರ, ಅಯಿಮೆ-ಕೊಯಿಮೆ, ಪದ್ದತಿ-ಪರಂಪರೆ, ನಮ್ಮೆ ನಾಳ್ ಕೊಡವಾಮೆನ ಹಾಗೂ ಕೊಡವ ಪಾಜೆನ ಉಳಿಸಿ ಬೆಳೆಸುವ ಉದ್ದೇಶದಿಂದ ಪೊಮ್ಮಕ್ಕಡ ಕೂಟವನ್ನು ರಚಿಸಲಾಗಿದೆ. ಪೊಮ್ಮಕ್ಕಡ ಕೂಟದ ಅಧ್ಯಕ್ಷರಾಗಿ ಕುಪ್ಪಣಮಾಡ ನಿವ್ಯಾ ಕಾವೇರಮ್ಮ, ಉಪಾಧ್ಯಕ್ಷರಾಗಿ ಮುಕ್ಕಾಟೀರ ಭಾರತಿ, ಕಾರ್ಯದರ್ಶಿಯಾಗಿ ಬೊಜ್ಜಂಗಡ ಭವ್ಯ ದೇವಯ್ಯ, ಜಂಟಿ ಕಾರ್ಯದರ್ಶಿಯಾಗಿ ಚೇಂದಿರ ವಿನ್ಸಿ ಅಪ್ಪಣ್ಣ, ಖಜಾಂಚಿಯಾಗಿ ಬೊಜ್ಜಂಗಡ ತೀಷ್ಮ (ತುಳಸಿ), ಸಾಂಸ್ಕೃತಿಕ ನಾಯಕಿಯಾಗಿ ಬಾನಂಗಡ ಭಾಗ್ಯ ಪ್ರದೀಪ್ ಹಾಗೂ ಕ್ರೀಡಾ ನಾಯಕಿಯಾಗಿ ಕಳ್ಳೇಂಗಡ ಅರ್ಚನಾ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಬಾನಂಗಡ ಪ್ರತಿಮಾ, ಕೊಡಂಗಡ ಡೈನ ದಮಯಂತಿ, ತೀತೀರಾ ಉರ್ಮಿಳಾ, ಬೊಳ್ಳಜ್ಜಿರ ರಾಧಾ ಕರುಂಬಯ್ಯ, ದಡ್ಡೆರ ದಮಯಂತಿ, ಚಂಗುಲಂಡ ಸುಮಾ ದಿಲೀಪ್ ಹಾಗೂ ಕುಪ್ಪಣಮಾಡ ಮೋನಿಕಾ ಚಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೊಡವ…
ಲೇಖಕ: admin
ಮಡಿಕೇರಿ, NEWS DESK ಅ. 5: ಇತ್ತೀಚೆಗೆ ವಿರಾಜಪೇಟೆಯಲ್ಲಿ ನಡೆದ ಗಣೇಶೋತ್ಸವ ಶೋಭಾಯಾತ್ರೆಯ ಸಂದರ್ಭ ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಬ್ಬಳ್ಳಿ ಮೂಲದ ಬಸವರಾಜ (22) ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಗೌರಿ-ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಡಿಜೆ ವಾಹನದ ಮೇಲಿದ್ದ ಬಸವರಾಜ ಅವರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಸುಟ್ಟ ಗಾಯಗಳಾಗಿದ್ದವು. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ, NEWS DESK ಅ.5: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಶಿಥಿಲಾವಸ್ಥೆಯ ಅಕ್ಷರ ದಾಸೋಹ ಅಡುಗೆ ಮನೆಗೆ ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ವತಿಯಿಂದ ಶ್ರಮದಾನದ ಮೂಲಕ ಕಾಯಕಲ್ಪ ನೀಡಲಾಯಿತು. ಶಾಲಾ ಮಕ್ಕಳಿಗೆ ಅಕ್ಷರ ದಾಸೋಹದ ಅಡುಗೆ ವ್ಯವಸ್ಥೆಗಾಗಿ ಈ ಕಟ್ಟಡದ ಅಗತ್ಯವಿರುವುದನ್ನು ಮನಗಂಡ ಮಂಡಳಿಯ ಸದಸ್ಯರು, ಕಟ್ಟಡವನ್ನು ಕೆಡವುವ ಬದಲು ಅಗತ್ಯ ದುರಸ್ತಿ ಕಾರ್ಯ ಕೈಗೊಂಡು ಉಳಿಸುವ ನಿರ್ಧಾರ ಕೈಗೊಂಡರು. ಅದರಂತೆ ಮಂಡಳಿಯ ಸದಸ್ಯರು ಶ್ರಮದಾನ ನಡೆಸಿ ಅಡುಗೆ ಮನೆಯ ಶಿಥಿಲಗೊಂಡ ಭಾಗಗಳನ್ನು ದುರಸ್ತಿ ಮಾಡಿದರು. ಇದರಿಂದ ಶಾಲೆಯಲ್ಲಿ ಅಕ್ಷರ ದಾಸೋಹದ ಅಡುಗೆ ವ್ಯವಸ್ಥೆಯನ್ನು ಮುಂದುವರಿಸಲು ಅನುಕೂಲವಾಗಿದ್ದು, ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ವತಿಯಿಂದ ಶ್ರಮದಾನದ ಮೂಲಕ ಕೈಗೊಂಡ ಈ ಕಾರ್ಯಕ್ಕೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ, NEWS DESK ಅ.5: ಮೃತಪಟ್ಟ ಪೊಲೀಸ್ ಸಿಬ್ಬಂದಿಯ ವಿಮಾ ಹಣವನ್ನು ಬಿಡುಗಡೆ ಮಾಡಲು ₹25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಆರೋಪದಡಿ ಕರ್ನಾಟಕ ಸರಕಾರಿ ವಿಮಾ ಇಲಾಖೆಯ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಗರದ ಮಹದೇವಪೇಟೆ ರಸ್ತೆಯಲ್ಲಿರುವ ಕರ್ನಾಟಕ ಸರಕಾರಿ ವಿಮಾ ಇಲಾಖೆಯ ಜಿಲ್ಲಾ ಕಚೇರಿಯ ಜಿಲ್ಲಾ ವಿಮಾ ಅಧಿಕಾರಿ ಹೇಮ್ ಕುಮಾರ್ ಲೋಕಾಯುಕ್ತರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್ ರೈ ಅವರು ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಪತ್ನಿ ರೋಹಿಣಿ ಅವರು ಪತಿಯ ವಿಮಾ ಹಣ ಪಡೆಯಲು ನಗರದ ಕರ್ನಾಟಕ ಸರಕಾರಿ ವಿಮಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ವಿಮಾ ಹಣ ಬಿಡುಗಡೆ ಮಾಡಲು ಜಿಲ್ಲಾ ವಿಮಾ ಅಧಿಕಾರಿ ಹೇಮ್ ಕುಮಾರ್ ಅವರು ₹25 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ರೋಹಿಣಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ…
ಮಡಿಕೇರಿ, NEWS DESK ಅ. 5: ನಗರದ ಗಣಪತಿ ಕೊಡವ ಕೇರಿಯ ವಾರ್ಷಿಕ ಮಹಾಸಭೆ ಹಾಗೂ ಒತ್ತೋರ್ಮೆ ಕೂಟವು ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಕೇರಿಯ ಅಧ್ಯಕ್ಷ ಕಿರಿಯಮಾಡ ರತನ್, ಕೊಡವ ಸಮುದಾಯದ ಪದ್ಧತಿ, ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೇಳಿದರು. ಮಕ್ಕಳನ್ನು ಕೊಡವ ಸಮುದಾಯದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವ ಮೂಲಕ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಹಿರಿಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದು ಅವರು ಕಿವಿಮಾತು ಹೇಳಿದರು. ಕೇರಿಯ ಕಾರ್ಯದರ್ಶಿ ಮಂಡೀರ ಸದಾ ಮುದ್ದಪ್ಪ ಅವರು ಕಳೆದ ಸಾಲಿನ ಲೆಕ್ಕಪತ್ರಗಳ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಪ್ರದಾಯಿಕ ಕೊಡವ ಊಟೋಪಚಾರದ ಮೂಲಕ ಒತ್ತೋರ್ಮೆ ಕೂಟದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಕಲಿಯಂಡ ಸ್ಮಿತಾ ಪ್ರಾರ್ಥಿಸಿ, ಚೌಂಡಿರ ಗಂಗಮ್ಮ ವಂದಿಸಿದರು. ಉಪಾಧ್ಯಕ್ಷ…
ವಿರಾಜಪೇಟೆ, NEWS DESK ಅ.05: ಐತಿಹಾಸಿಕ ವಿರಾಜಪೇಟೆ ಗೌರಿ-ಗಣೇಶ ಉತ್ಸವದ ವಿಸರ್ಜನಾ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಸವೇಶ್ವರ ದೇವಸ್ಥಾನ ಉತ್ಸವ ಸಮಿತಿ ವತಿಯಿಂದ ವಿಶೇಷ ಶಾಂತಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ನಗರದ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬಸವೇಶ್ವರ ಸ್ವಾಮಿಯ ನಂದಿ ವಿಗ್ರಹಕ್ಕೆ ವಿಶೇಷ ಮಹಾಪೂಜೆ ಹಾಗೂ ಶಾಂತಿ ಪೂಜೆ ಸಲ್ಲಿಸಲಾಯಿತು. ಗೌರಿ-ಗಣೇಶ ಉತ್ಸವ ಯಾವುದೇ ವಿಘ್ನಗಳಿಲ್ಲದೆ ಶಾಂತಿಯುತವಾಗಿ ನೆರವೇರಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಅಲ್ಲದೆ, ಊರಿನಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಣೆ ಪೂಜಾ ಕಾರ್ಯಕ್ರಮದ ಬಳಿಕ ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಸಾಂಪ್ರದಾಯಿಕವಾಗಿ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕಾಮತ್, ಉಪಾಧ್ಯಕ್ಷ ಪುಷ್ಪರಾಜ್ ಜೈನ್, ಸಂಪತ್, ಕಾರ್ಯದರ್ಶಿ ಜೆ.ಎನ್. ಪ್ರಸಾದ್, ವಿ.ಆರ್. ಪುರುಷೋತ್ತಮ್, ಜೆ.ಪಿ. ಅರುಣ್ ಜೈನ್, ಸದಸ್ಯರಾದ ಜೆ.ವಿ. ಪ್ರಕಾಶ್, ಡಾ. ಎನ್.…
ವಿರಾಜಪೇಟೆ, NEWS DESK ಅ.05: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ವಿರಾಜಪೇಟೆ ತಾಲೂಕು, ವಿರಾಜಪೇಟೆ ವಲಯದ ವತಿಯಿಂದ ಬಿಟ್ಟಂಗಾಲ ಸಮುದಾಯ ಭವನದಲ್ಲಿ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ಹಾಗೂ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಾಧಾ ಅವರು ಸ್ವಉದ್ಯೋಗದ ಕುರಿತು ಮಾಹಿತಿ ನೀಡಿದರು. “ನಿರುದ್ಯೋಗ ಎಂಬುದು ಸಮಸ್ಯೆಯಲ್ಲ. ಉದ್ಯೋಗ ಮಾಡಲು ನೂರಾರು ಮಾರ್ಗಗಳಿವೆ. ನಾನು ಮನೆಯಲ್ಲಿಯೇ ಅಣಬೆ ಕೃಷಿ, ವಿವಿಧ ಆಹಾರ ಪದಾರ್ಥಗಳ ತಯಾರಿಕೆ, ಉಪ್ಪಿನಕಾಯಿ ಹಾಗೂ ಸಾಂಬಾರ ಪದಾರ್ಥಗಳ ತಯಾರಿಕೆಯಂತಹ ಹಲವು ಸ್ವಉದ್ಯೋಗಗಳನ್ನು ಕೈಗೊಂಡು ಯಶಸ್ವಿಯಾಗಿದ್ದೇನೆ. ಗ್ರಾಮೀಣ ಮಹಿಳೆಯರು ಇಂತಹ ಸ್ವಉದ್ಯೋಗಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ” ಎಂದು ಹೇಳಿದರು. ಸ್ವಉದ್ಯೋಗಿಯಾಗಿರುವ ಸುಧಾ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆರ್ಥಿಕ ನೆರವು ಪಡೆದು ಸ್ವಉದ್ಯೋಗ ಆರಂಭಿಸಿ ಉತ್ತಮ ಲಾಭ ಗಳಿಸುತ್ತಿರುವ ತಮ್ಮ ಅನುಭವವನ್ನು ಹಂಚಿಕೊಂಡರು. ಬಿಟ್ಟಂಗಾಲ ಒಕ್ಕೂಟದ ಕೋಶಾಧಿಕಾರಿ ಪೊನ್ನಮ್ಮ ಮಾತನಾಡಿ, ಗ್ರಾಮೀಣ…
ಚೆಟ್ಟಳ್ಳಿ, NEWS DESK ಅ.05: ಸಾಂಪ್ರದಾಯಿಕ ಕೇರಳದ ಸಂಸ್ಕೃತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಸಂದೇಶ ಸಾರುವ 18ನೇ ವರ್ಷದ ಓಣಂ ಆಚರಣೆಯು ಹಿಂದೂ ಮಲಯಾಳಿ ಸಮಾಜ, ಚೆಟ್ಟಳ್ಳಿ ಕೊಡಗು ವತಿಯಿಂದ ಇಲ್ಲಿನ ಮಂಗಳ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಮಹಾಬಲಿಯನ್ನು ಸಂಭ್ರಮದಿಂದ ಸ್ವಾಗತಿಸಿ, ಜ್ಯೋತಿ ಬೆಳಗಿಸುವ ಮೂಲಕ ಓಣಂ ಆಚರಣೆಗೆ ಚಾಲನೆ ನೀಡಲಾಯಿತು. ಬಳಿಕ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ವಿವಿಧ ಮನರಂಜನಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಮಾಜದ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಮಧ್ಯಾಹ್ನ ಸಾಂಪ್ರದಾಯಿಕ ಓಣಂ ಸದ್ಯದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ನಂತರ ಸಂಘದ ಅಧ್ಯಕ್ಷೆ ಪಿ.ಕೆ. ಲೀಲಾ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್‌ಎಲ್‌ಎನ್ ಪ್ಲಾಂಟೇಷನ್‌ನ ವ್ಯವಸ್ಥಾಪಕ ಕಣ್ಣನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೇರಳದ ಸಾಂಪ್ರದಾಯಿಕ ಓಣಂ ಸಂಭ್ರಮವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಗಮನ ಸೆಳೆದವು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.…
ವಿರಾಜಪೇಟೆ, NEWS DESK ಅ. 6: ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (YSS) ವತಿಯಿಂದ ವಿರಾಜಪೇಟೆಯ ಶ್ರೀ ಕಾವೇರಿ ಆಶ್ರಮದಲ್ಲಿ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಅ. 6ರಂದು ಬೆಳಗ್ಗೆ 9.30ರಿಂದ ಆಯೋಜಿಸಲಾಗಿದೆ. ಶ್ರೀ ಶ್ರೀ ಪರಮಹಂಸ ಯೋಗಾನಂದರು 1917ರಲ್ಲಿ ಸ್ಥಾಪಿಸಿದ YSS ಸಂಸ್ಥೆಯ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಾಚೀನ ವೈಜ್ಞಾನಿಕ ಕ್ರಿಯಾ ಯೋಗ ಧ್ಯಾನವನ್ನು ಪರಿಚಯಿಸಲಾಗುತ್ತದೆ. ಅಂತರಂಗದ ಶಾಂತಿ, ಭಕ್ತಿ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಅನುಕೂಲಕರವಾದ ವಾತಾವರಣ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಹಿರಿಯ ಸನ್ಯಾಸಿಗಳ ನೇತೃತ್ವದಲ್ಲಿ ಮಾರ್ಗದರ್ಶಿತ ಧ್ಯಾನ, ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಕ್ರಿಯಾ ಯೋಗವನ್ನು ಕಲಿಯಲು ಆಸಕ್ತರಿಗೆ ಪಾಠಗಳ ಕುರಿತು ಅಗತ್ಯ ಮಾರ್ಗದರ್ಶನ ಮತ್ತು ನೋಂದಣಿ ಸೌಲಭ್ಯವೂ ಇರಲಿದೆ. YSS ಪರಂಪರೆಯಲ್ಲಿ ಬೋಧಿಸಲಾಗುವ ಕ್ರಿಯಾ ಯೋಗವು ಪ್ರಾಚೀನ ಧ್ಯಾನ ತಂತ್ರವಾಗಿದ್ದು, ಶ್ರೀ ಶ್ರೀ ಪರಮಹಂಸ ಯೋಗಾನಂದರು ಈ ಜ್ಞಾನವನ್ನು ವಿಶ್ವದಾದ್ಯಂತ ಪರಿಚಯಿಸಿದರು. ಅಂತರಂಗದ ಶಾಂತಿ, ದೈವಿಕ ಆನಂದ, ಜ್ಞಾನ ಹಾಗೂ ವ್ಯಕ್ತಿಯೊಳಗಿನ ದೈವಿಕ ಚೈತನ್ಯದ ಅರಿವನ್ನು…
ಮೂರ್ನಾಡು, NEWS DESK ಅ.05: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಬಿ.ಬಿ. ಅಶ್ವಥ್ ರೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲಿಂಗಪ್ಪ ಬಿ.ಎಸ್., ಗೌರವಾಧ್ಯಕ್ಷರಾಗಿ ಎನ್.ಕೆ. ಕುಂಞರಾಮ, ಕಾರ್ಯದರ್ಶಿಯಾಗಿ ಎನ್.ಎನ್. ಶರಣು, ಸಹ-ಕಾರ್ಯದರ್ಶಿಯಾಗಿ ಟಿ.ವಿ. ಹರೇಂದ್ರ, ಖಜಾಂಚಿಯಾಗಿ ಹೆಚ್.ಹೆಚ್. ಜಯಂತ್ ಕುಮಾರ್ ಹಾಗೂ 16 ನಿರ್ದೇಶಕರು ನೂತನ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಯ ನೇತೃತ್ವದಲ್ಲಿ ಮೂರ್ನಾಡು ಪಟ್ಟಣದಲ್ಲಿ 20ರಂದು ನಡೆಯಲಿರುವ ಅದ್ಧೂರಿ ಆಯುಧ ಪೂಜಾ ಸಮಾರಂಭಕ್ಕೆ ವಿಶೇಷ ತಯಾರಿ ನಡೆಸಲಾಗುತ್ತಿದೆ.






