ಮಡಿಕೇರಿ ಜ.18 : ಸದಸ್ಯರೇ ರೋಟರಿ ಸಂಸ್ಥೆಗಳ ಜೀವಾಳವಾಗಿದ್ದು, ಹೊಸಪೀಳಿಗೆಯ ಸದಸ್ಯರ ಸೇಪ೯ಡೆ ಮೂಲಕ ರೋಟರಿಯಲ್ಲಿ ಬದಲಾವಣೆಯ ಗಾಳಿ ಬೀಸುವ ಅಗತ್ಯವಿದೆ ಎಂದು ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ನೀಡಿದ ಸಂದಭ೯ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಪ್ರಕಾಶ್ ಕಾರಂತ್, ಅಂತರ ರಾಷ್ಟ್ರೀಯ ರೋಟರಿಯ 118 ವಷ೯ಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಾದ ಜೆನಿಫರ್ ಜೋನ್ಸ್ ಅಧ್ಯಕ್ಷೆಯಾಗಿದ್ದು, ಈ ಮೂಲಕ ಮಹಿಳೆಯರಿಗೆ ರೋಟರಿ ಸಂಸ್ಥೆ ಪ್ರಾಮುಖ್ಯತೆಯನ್ನು ನೀಡಿದೆ. ಪ್ರತೀ ರೋಟರಿ ಸಂಸ್ಥೆಯಲ್ಲಿಯೂ ಶೇ.30 ರಷ್ಟು ಮಹಿಳಾ ಸದಸ್ಯರು ಇರುವಂತೆ ಗಮನ ಹರಿಸಲಾಗುತ್ತಿದೆ. ಮಹಿಳೆಯರ ಆಡಳಿತದಲ್ಲಿ ಅಭಿವೃದ್ಧಿಪರ ಚಿಂತನೆಗಳು ಹೆಚ್ಚುತ್ತದೆ ಎಂಬುದಕ್ಕೆ ಅನೇಕ ನಿದಶ೯ನಗಳಿದೆ. ಹೀಗಾಗಿ ರೋಟರಿ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯೆಯರೂ ಸಕ್ರಿಯರಾಗಿ ಪಾಲ್ಗೊಳ್ಳುವಂತಾಗಬೇಕೆಂದು ಕರೆ ನೀಡಿದರು.
ಸದಸ್ಯರೇ ರೋಟರಿಯ ಜೀವಾಳವಾಗಿರುವ ಹಿನ್ನಲೆಯಲ್ಲಿ ರೋಟರಿಯಲ್ಲಿ ಸದಸ್ಯತ್ವ ಹೆಚ್ಚಳಕ್ಕೆ ಪ್ರತೀ ವಷ೯ ಪ್ರಯತ್ನಿಸಲಾಗುತ್ತಿದೆ. ಸೇವಾ ಮನೋಭಾವ ಮತ್ತು ಜೀವನಮೌಲ್ಯಗಳ ಗುಣ ಹೊಂದಿರುವವರನ್ನು ಸದಸ್ಯರನ್ನಾಗಿ ಸೇಪ೯ಡೆ ಮಾಡಲಾಗುತ್ತಿದೆ. ಈ ಮೂಲಕ ರೋಟರಿಯುವ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಸಾಮಾಜಿಕ ಸೇವಾ ಯೋಜನೆಗಳನ್ನು ಕಾಯ೯ಗತಗೊಳಿಸಲು ಮುಂದಾಗಿದೆ ಎಂದೂ ಪ್ರಕಾಶ್ ಕಾರಂತ್ ಹೇಳಿದರು.
ರೋಟರಿ ದತ್ತಿನಿಧಿಗೆ ರೋಟರಿ ಸದಸ್ಯರು ನೀಡುವ ದೇಣಿಗೆಯಿಂದಾಗಿ ವಿಶ್ವವ್ಯಾಪಿ ಅನೇಕ ಸಂತ್ರಸ್ತರಿಗೆ ಪ್ರಯೋಜನವಾಗುತ್ತಲೇ ಇದೆ. ಈ ರೀತಿ ದೇಣಿಗೆ ನೀಡಲು ರೋಟರಿ ಸದಸ್ಯರು ಹಿಂದೇಟು ಹಾಕುತ್ತಿಲ್ಲ ಎಂಬುದಕ್ಕೆ ಪ್ರತೀ ವಷ೯ವೂ ದತ್ತಿನಿಧಿಗೆ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿರುವುದೇ ಉದಾಹರಣೆಯಾಗಿದೆ ಎಂದೂ ಪ್ರಕಾಶ್ ಕಾರಂತ್ ಹಷ೯ ವ್ಯಕ್ತಪಡಿಸಿದರು.
ಮಿಸ್ಟಿ ಹಿಲ್ಸ್ ವಾತಾ೯ಸಂಚಿಕೆ ಸಂಪಾದಕ ಅನಿಲ್ ಎಚ್.ಟಿ. ಸಂಪಾದಕತ್ವದಲ್ಲಿ ಪ್ರಕಟವಾದ ರೋಟೋ ಮಿಸ್ಟ್ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ರೋಟರಿ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ಇದೇ 24 ರಂದು ಮಡಿಕೇರಿ ರೋಟರಿ ಸಂಸ್ಥೆಯಿಂದ ರೈಡ್ ಫಾರ್ ರೋಟರಿ ಅಭಿಯಾನದಡಿ ಮಡಿಕೇರಿಗೆ ಬರುತ್ತಿರುವ ದೇಶವಿದೇಶಗಳ 24 ಬೈಕ್ ಸವಾರರಿಗೆ ಆತಿಥ್ಯ ವಹಿಸಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆಯ ಸಂದೇಶದೊಂದಿಗೆ ಈ ಬೈಕ್ ಜಾಥಾ ಮಡಿಕೇರಿಗೆ ಬರುತ್ತಿದೆ ಎಂದು ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, 18 ವಷ೯ಗಳ ರೋಟರಿ ಮಿಸ್ಟಿ ಹಿಲ್ಸ್ ನಾನಾ ಕಾಯ೯ಯೋಜನೆಗಳ ಮೂಲಕ ಜನತೆಗೆ ಸ್ಪಂದಿಸಿದೆ ಎಂದು ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ ಸಂಸ್ಥೆಯ ವರದಿ ಮಂಡಿಸಿದರು.
ಇದೇ ಸಂದಭ೯ ರೋಟರಿ ಮಿಸ್ಟಿ ಹಿಲ್ಸ್ ಗೆ ನೂತನ ಸದಸ್ಯರಾಗಿ ಡಾ.ಚೇತನ್, ಕಪಿಲ್ ದುಗ್ಗಳ ಮತ್ತು ಸುಮತಿ ವಿಶ್ವನಾಥ್ ಅವರನ್ನು ಸೇಪ೯ಡೆಗೊಳಿಸಲಾಯಿತು. ವಿವಿಧ ರೋಟರಿ ಸಂಸ್ಥೆಗಳ ನೂರಾರು ಸದಸ್ಯರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನವನ್ನು ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್ ನೆರವೇರಿಸಿದರು.
ಪುಪ್ಪೋದ್ಯಾನ ನಿವ೯ಹಣೆಗಾಗಿ ಮಡಿಕೇರಿಯ ಸವಿತಾ ಕೆ.ಭಟ್, ವಿಜ್ಞಾನ ವಾಹಿನಿ ಕಾಯ೯ಕ್ರಮಕ್ಕಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಮುಖ್ಯಸ್ಥ ಎಸ್.ಪ್ರವೀಣ್ ಕುಮಾರ್, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾಯ೯ದಶಿ೯ ಅಂಬೆಕಲ್ ಜೀವನ್ ಕುಶಾಲಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ, ಬೈಕ್ ಮಾದರಿಗಳ ತಯಾರಿಕೆಗಾಗಿ ಬಿಳಿಗೇರಿ ನೀಕ೯ಜೆ ಎಸ್ಟೇಟ್ ನ ಯುವ ಸಾಧಕ ಎನ್.ಕೆ. ಆಕಾಶ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಹಾಯಕ ಗವನ೯ರ್ ರತನ್ ತಮ್ಮಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ ಹಾಜರಿದ್ದರು.