ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ವೀರಾಂಜನೇಯ ಯುವಕ ಸಂಘ, ಚೆಟ್ಟಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆರನೇ ವರ್ಷದ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ವನ್ನು ದಿನಾಂಕ 15-02-2026 ಭಾನುವಾರ ಸಂಜೆ 6 ಗಂಟೆಗೆ ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಈರಳೆ ವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿ ಹಾಗೂ ಸಂಘದ ಮುಖ್ಯ ಕಚೇರಿಯಲ್ಲಿರುವ ಶ್ರೀ ವಿನಾಯಕ, ಪಶುಪತಿನಾಥ, ಶ್ರೀ ಕಾವೇರಿಮಾತೆ, ಶ್ರೀ ಕೃಷ್ಣ, ಗೋಮಾತೆ, ಶ್ರೀ ಆಂಜನೇಯ ಮತ್ತು ಶ್ರೀಮಹಾವಿಷ್ಣು ಮೂರ್ತಿಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ.

ಸಂಜೆ 7 ಗಂಟೆಯಿಂದ ಕುಶಾಲನಗರದ ವಿದೂಷಿ ಶ್ರೀಮತಿ ವಿನುತ ಹೇಮಂತ್ ಅವರಿಂದ ಭರತನಾಟ್ಯ ಕಾರ್ಯಕ್ರಮ, ನಂತರ ಬ್ಲೂಸ್ಟಾರ್ ಬೀಟ್ಸ್, ಕುಶಾಲನಗರ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.








