ಮಡಿಕೇರಿ ಜ.18 : ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಹಿರಿಯರನ್ನು ಭೇಟಿಯಾಗಿ ಸಮಸ್ಯೆಗಳ ಕುರಿತು ಚರ್ಚಿಸಿದರು.
ಕುಂದಚೇರಿ ಪಂಚಾಯಿತಿ ವ್ಯಾಪ್ತಿಯ ಚೆಟ್ಟಿಮಾನಿ, ಕುಂದಚೇರಿ, ಪದಕಲ್ಲು, ಕೋಪಟ್ಟಿ ಮತ್ತು ಸಿಂಗತ್ತೂರು ಗ್ರಾಮದ ಹಿರಿಯ ಮುಖಂಡರು, ಸಮಾಜ ಸೇವಕರು, ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜಿಕ ಕಳಕಳಿ ಮೆರೆಯುತ್ತಿರುವವರ ಮನೆಗಳಿಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷರಾದ ಸವಿತ ಉದಯ ಕುಮಾರ್, ಉಪಾಧ್ಯಕ್ಷ ವಿಶುಪ್ರವೀಣ್ ಕುಮಾರ್, ಹಿರಿಯ ಸದಸ್ಯ ಕೆ.ಯು.ಹಾರಿಸ್, ವಲಯಾಧ್ಯಕ್ಷ ಕೆದಂಬಾಡಿ ಹರೀಶ್, ಹಿರಿಯ ಮುಖಂಡರಾದ ಕೆದಂಬಾಡಿ ರಘುನಾಥ್, ಕೆದಂಬಾಡಿ ಸುರೇಂದ್ರ, ಕೆದಂಬಾಡಿ ರಮೇಶ್, ಮುಕ್ಕಾಟಿ ನೇತ್ರಾವತಿ, ಚೂದಾಡಮ್ಮನ ರುಕ್ಮಿಣಿ, ಹೆಚ್.ಎಂ.ಕೃಷ್ಣಪ್ಪ (ಕಿಟ್ಟ) ಸಿ.ಎಸ್.ರಶೀದ್, ಕೆ.ಕೆ.ಹಂಸ, ತಮ್ಲೀಮ್, ಕೆದಂಬಾಡಿ ಹೂವಣ್ಣ, ಕೆದಂಬಾಡಿ ವಿಶ್ವನಾಥ್, ಕೆ.ಎಂ.ಇಸ್ಮಾಯಿಲ್ ಹಾಜಿ, ಸಾಂಧೀಪನಿ ವಿದ್ಯಾಪೀಠದ ಮುಖ್ಯಸ್ಥರಾದ ಕೆ.ಆರ್.ಯೋಗೇಶ್, ವಕೀಲ ಎಂ.ಆರ್.ಗಣೇಶ್, ಕೆ.ಪಿಸಿಸಿ ಸದಸ್ಯ ರಮಾನಾಥ್ ಬೇಕಲ್, ಡಿಸಿಸಿ ಸದಸ್ಯ ಸುನಿಲ್ ಪತ್ರಾವೊ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಕುದುಪಜೆ ಪ್ರಕಾಶ್, ಲತೀಫ್ ಪುತ್ತು, ಬಶೀರ್ ಚೇರಂಬಾಣೆ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.