ಸಿದ್ದಾಪುರ ಜ.18 : ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಅಮ್ಮತ್ತಿ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಜ.20 ರಿಂದ 29 ರವರೆಗೆ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಲಿಜೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು, ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿಯು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜ.20 ರಂದು ಸಂಜೆ 7.30ಕ್ಕೆ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ, ಭಾರತ ತಂಡದ ತಾಂತ್ರಿಕ ಸಮಿತಿ ಸಲಹೆಗಾರ ಐ.ಎಂ.ವಿಜಯನ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕ್ಯಾಪ್ಟನ್ ಅಯ್ಯಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಕಾರ್ಮಾಡು ಗ್ರಾ.ಪಂ ಅಧ್ಯಕ್ಷ ನಿರನ್ ನಾಣಯ್ಯ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪಾಣತ್ತಲೆ ಸೇರಿದಂತೆ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.
ಫೈನಲ್ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ಜ.29 ರಂದು ನಡೆಯಲಿದ್ದು, ಪಂದ್ಯಾವಳಿ ವೀಕ್ಷಣೆಗೆ 16 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. 16 ವರ್ಷ ಮೇಲ್ಪಟ್ಟವರಿಗೆ ರೂ.100 ಗ್ಯಾಲರಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದರು. ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳು ಪಂದ್ಯಾವಳಿ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಶೀದ್, ಉಪಾಧ್ಯಕ್ಷ ಮುಸ್ತಫಾ, ಖಜಾಂಚಿ ಭವಿನ್ ಉಪಸ್ಥಿತರಿದ್ದರು.















