ಮಡಿಕೇರಿ ಜ 18. ಜಿಲ್ಲೆಯ ಹಿರಿಯ ಸಾಹಿತಿ, ಕತೆಗಾರ ಪೂ ರಾ ಶ್ರೀನಿವಾಸ್ ಮತ್ತು ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷರು ಸಮಾಜ ಸೇವಾಕರ್ತರೂ ಆದ ಎಂ.ಸಿ.ವಾಸುದೇವ್ ರವರು ನಿನ್ನೆ ನಿಧನರಾಗಿರುತ್ತಾರೆ.
ಪೂರಾ ಶ್ರೀನಿವಾಸ್‌ರವರು ಕವಿಗಳು, ಸಾಹಿತಿ ಮತ್ತು ಲೇಖಕರು ಆಗಿದ್ದು ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ ಹಾಗೆಯೇ ಎಂ.ಸಿ ವಾಸುದೇವ್ ರವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದು ಅಪಾರ ಸೇವೆ ಸಲ್ಲಿಸಿರುತ್ತಾರೆ ಎಂದು ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೇಕಲ್ ನವೀನ್ ನುಡಿದರು. ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಜಿಲ್ಲಾ ಕಸಾಪ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು
ಸಭೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷರಾದ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ನಿರ್ದೇಶಕರಾದ ಟಿ.ಪಿ ರಮೇಶ್
ರವರು ಮಾತನಾಡಿ ಪೂ.ರಾ ಶ್ರೀನಿವಾಸರವರು ೫೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದನ್ನು ಸ್ಮರಿಸಿದ ಅವರು ಪೂ.ರಾ ಅವರು ಸಾಹಿತಿಯಾಗಿ,ಕವಿಯಾಗಿ,
ಕಥೆಗಾರರಾಗಿ ಉತ್ತಮ ಲೇಖಕರಾಗಿ ಕೊಡಗು ಜಿಲ್ಲೆಯಲ್ಲಿ ಹೆಸರು ಮಾಡಿದ್ದರು.ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರಿದ ರಮೇಶ್ ರವರು ಮತ್ತೊಬ್ಬ ಆತ್ಮೀಯ ಗೆಳೆಯ ಎಂ.ಸಿ ವಾಸುದೇವರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಅವರು ವಾಸುದೇವರವರು ವಕೀಲರಾಗಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಮಡಿಕೇರಿ
ಪುರಸಭೆಯ ಅಧ್ಯಕ್ಷರಾಗಿ ನಗರದ ಸರ್ವಾಂಗೀಣ ಬೆಳವಣಿಗೆಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಮಡಿಕೇರಿ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಮಡಿಕೇರಿ ದಸರಾ ಕಾರ್ಯಕ್ರಮಗಳನ್ನು ಮಡಿಕೇರಿಯ ಗಾಂಧಿ ಮಂಟಪಕ್ಕೆ ಸ್ಥಳಾಂತರ ಮಾಡಿದ್ದು ಇವರು ಪುರಸಭಾಧ್ಯಕ್ಷರಾಗಿದ್ದಾಗ ಎಂದರು. ಸಾರ್ವಜನಿಕ ಜೀವನದಲ್ಲಿ
ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಅಧ್ಯಕ್ಷರಾದ ಮೊಣ್ಣಂಡ ಶೋಭಾ ಸುಬ್ಬಯ್ಯನವರು ಮಾತನಾಡಿ ಪೂ.ರಾ ಶ್ರೀನಿವಾಸ್ ರವರು ಜಿಲ್ಲೆಗೆ ಸಾಹಿತ್ಯಿಕವಾಗಿ ಅತ್ಯುತ್ತಮ ಕೊಡುಗೆ ನೀಡಿರುತ್ತಾರೆ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ತಿಳಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದ ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾಯುಕ್ತರಾದ ಬೇಬಿಮ್ಯಾಥ್ಯುರವರು ಮಾತನಾಡಿ ಪೂ.ರಾ ಶ್ರೀನಿವಾಸ ಮತ್ತು ಎಂ.ಸಿ ವಾಸುದೇವವರವರು ಮಾಡಿದ ಉತ್ತಮ ಕೆಲಸಗಳ ಬಗ್ಗೆ ಮಾತನಾಡಿದರು.
ನಂತರ ಪರಿಷತ್ತಿನ ಸದಸ್ಯರಾದ ಲಿಯಾಕತ್ ಆಲಿ ಅವರು ಮಾತನಾಡಿ ಸ್ನೇಹಿತ ಪೂ.ರಾ ಶ್ರೀನಿವಾಸ ರವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸೇವೆಯನ್ನು ಶ್ಲಾಘಿಸಿದರು. ಹಾಗೆಯೇ ಎಂ.ಸಿ ವಾಸುದೇವರವರು ಮಾಡಿದ ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘಿಸಿದರು.ಮಡಿಕೇರಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಬೆಪುರನ ಮೇದಪ್ಪನವರು ಶ್ರದ್ದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದು ಸಾಹಿತಿ ಪೂ.ರಾ ಶ್ರೀನಿವಾಸ್ ಮತ್ತು ಮಡಿಕೇರಿ
ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಸಿ.ವಾಸುದೇವರವರು ಮಾಡಿದ ಸಾಹಿತ್ಯ ಕ್ಷೇತ್ರ ಮತ್ತು ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘಿಸಿದರು.
ಶೃದ್ದಾಂಜಲಿ ಸಭೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ವಿಶೇಷ ಆಹ್ವಾನಿತರಾದ ಚೊಕ್ಕಾಡಿ ಪ್ರೇಮ ರಾಘವಯ್ಯ ಮತ್ತು ಪರಿಷತ್ತಿನ ಸಿಬ್ಬಂದಿ ಪವಿತ್ರ ಉಪಸ್ಥಿತರಿದ್ದರು.