ಮಡಿಕೇರಿ ಜ.25 : ಸೋಮವಾರಪೇಟೆ ಲಯನ್ಸ್ ಸಂಸ್ಥೆ ವತಿಯಿಂದ ಸಂಸ್ಥೆಯ ಸದಸ್ಯರು ಹಾಗೂ ಕಾಜೂರು ಗ್ರಾಮದ ವಸಂತ ಮತ್ತು ಪುಷ್ಪ ದಂಪತಿಯ ಪುತ್ರಿ ಕೆ.ಯು.ರಂಜಿತ (22) ಅವರ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಸಿ.ಕೆ.ರೋಹಿತ್ ಹಾಗೂ ಪದಾಧಿಕಾರಿಗಳು ನಿವಾಸಕ್ಕೆ ತೆರಳಿ ಶಸ್ತ್ರ ಚಿಕಿತ್ಸೆಗೆ ಸಹಕಾರ ಆಗುವ ನಿಟ್ಟಿನಲ್ಲಿ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಕೆ.ಎನ್.ತೇಜಸ್ವಿ, ಸದಸ್ಯರುಗಳಾದ ಕೆ.ಎಂ.ಜಗದೀಶ್, ಎಸ್.ಎನ್.ಯೋಗೇಶ್, ಪದ್ಮಕರ್ ರಾಜ್ ಹಾಜರಿದ್ದರು.







