ಮಡಿಕೇರಿ ಜ.26 : ರಾಷ್ಟ್ರ ಪ್ರೇಮ ಉದ್ದೀಪನಗೊಳಿಸುವ, ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾಡಳಿತದಿಂದ ಆಯೋಜಿತ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಶಾಲಾ ತಂಡಗಳು ಪ್ರದರ್ಶಿಸುವ ಮೂಲಕ ಗಮನ ಸೆಳೆದವು.
ಜವಾಹರ್ ನವೋದಯ ವಿದ್ಯಾಲಯ ತಂಡ ಕೊಡಗಿನ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರವಾಯಿತಾದರೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮಕ್ಕಳು, ಕೋವಿಡ್ ಸಂದರ್ಭ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ರೂಪಿಸಿದ ಕ್ರಮಗಳು, ಕೋವಿಡ್ ನಂತರ ಸರ್ಕಾರ ಶೈಕ್ಷಣಿಕ ಉತ್ತೇಜನಕ್ಕಾಗಿ ರೂಪಿಸಿದ ಯೋಜನೆಗಳನ್ನು ತಿಳಿಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿ ಗಮನ ಸೆಳೆಯಿತು.
ನಗರದ ಸಂತ ಜೋಸೆಫರ ಶಾಲೆ, ಲಿಟ್ಲ್ ಫ್ಲವರ್, ಬ್ಲಾಸಂ ಶಾಲೆ, ಸಂತ ಮೈಕೆಲರ ಶಾಲೆ, ಜನರಲ್ ತಿಮ್ಮಯ್ಯ ಶಾಲಾ ತಂಡಗಳು ವಿವಿಧ ದೇಶ ಭಕ್ತಿ ಗೀತೆಗಳಿಗೆ ಅತ್ಯಾಕರ್ಷಕವಾದ ನೃತ್ಯವನ್ನು ಪ್ರಸ್ತುತ ಪಡಿಸಿ ಗಮನ ಸೆಳೆದವು.
Breaking News
- *ಎಸ್.ಕೆ.ಎಸ್.ಎಸ್.ಎಫ್ ಸಿದ್ದಾಪುರ ವಲಯ ಮಟ್ಟದ ಇಸ್ಲಾಮಿಕ್ ಕಲೋತ್ಸವ : ಸಿದ್ದಾಪುರ ಯೂನಿಟ್ ಚಾಂಪಿಯನ್ಸ್*
- ಕರ್ನಾಟಕ ತಂಡದ ನಾಯಕಿಯಾಗಿ ಕೊಡಗು ವಿದ್ಯಾಲಯದ ಪರ್ಲಿನ್ ಪೊನ್ನಮ್ಮ
- *ಕುಶಾಲನಗರದಲ್ಲಿ ಕಾವೇರಿ ನದಿಗೆ 166ನೇ ಮಹಾಆರತಿ*
- *ವಿರಾಜಪೇಟೆಯಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ : ಐವರ ಬಂಧನ*
- *ಗುಡ್ಡೆಹೊಸೂರು : ರಾಷ್ಟ್ರೀಕೃತ ಬ್ಯಾಂಕ್ ಮಾದರಿಯ ಡಿಜಿಟಲೀಕರಣ ವ್ಯವಸ್ಥೆ ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ನಲ್ಲೂ ಅತ್ಯಗತ್ಯ : ಎಂ.ಎಂ.ಶ್ಯಾಮಲ*
- *ರಾಷ್ಟ್ರೀಯ ಸಬ್ ಜೂನಿಯರ್ ಮಹಿಳಾ ಹಾಕಿ ತಂಡದ ಸೆಂಟರ್ ಫಾರ್ವರ್ಡ್ ಆಗಿ ಮಡಿಕೇರಿಯ ಅಕ್ಷರ*
- *ಸೋಮವಾರಪೇಟೆ : ಅಪ್ಪು ಅಭಿಮಾನಿಗಳ ಬಳಗದಿಂದ ಸಂಭ್ರಮದ ಮಕ್ಕಳ ದಿನಾಚರಣೆ : ಹಲವು ಸಾಧಕರಿಗೆ ಸನ್ಮಾನ*
- *ನಿಧನ ಸುದ್ದಿ*
- *ಮಡಿಕೇರಿ ಅಂಗನವಾಡಿಯಲ್ಲಿ ಬಾಲಮೇಳದಲ್ಲಿ ಮಿಂಚಿದ ಪುಟಾಣಿಗಳು*
- *ಮಡಿಕೇರಿಯ ಎಸ್ಎಸ್ ಆಸ್ಪತ್ರೆಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ : ಕಲಾಪ್ರತಿಭೆಗೆ ಸಾಕ್ಷಿಯಾದ ವಿದ್ಯಾರ್ಥಿಗಳು*