ಮಡಿಕೇರಿ ಜ.27 : ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಅಮೃತ ಸರೋವರದ ದಂಡೆ ಮೇಲೆ ಗಣರಾಜೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಾಪೋಕ್ಲು, ಕಾಂತೂರು ಮೂರ್ನಾಡು, ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರ ದಂಡೆ ಮೇಲೆ ಮಾಜಿ ಸೈನಿಕರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಶ್ರಮದಾನ, ಗಿಡ ನೆಡುವ ಮೂಲಕ ಗಣರಾಜ್ಯೋತ್ಸವವನ್ನು ಅರ್ಥಪೂರ್ಣಗೊಳಿಸಲಾಯಿತು.










