ಮಡಿಕೇರಿ ಜ.27 : ಕೊಡ್ಲಿಪೇಟೆಯ ದಲಿತ ಸಂಘಟನೆಗಳ ವತಿಯಿಂದ 74ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
ನಂತರ ಭಾರತ ಸಂವಿಧಾನವನ್ನು ಓದುವ ಮೂಲಕ ಸಂವಿಧಾನದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭ ಕೊಡ್ಲಿಪೇಟೆ ಪಿಡಿಒ ಹೂವಯ್ಯ, ದಲಿತ ನಾಯಕರುಗಳಾದ ಜೆ.ಎಲ್.ಜನಾರ್ಧನ್, ಸೋಮಣ್ಣ, ಗ್ರಾ.ಪಂ ಸದಸ್ಯ ಪ್ರಸನ್ನ, ಪ್ರಮುಖರಾದ ಜಗದೀಶ್, ಇಂದ್ರೇಶ್, ವೀರಭದ್ರ, ವಸಂತ್, ಕಾರ್ತಿಕ್, ವಿಜಯ, ಮುರಳಿ ಸತೀಶ್, ವಿನಯ್, ಪ್ರಶಾಂತ್, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.









