ಚೆಯ್ಯಂಡಾಣೆ ಜ.27 : ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಿವೃತ್ತ ಬ್ರಿಗೇಡಿಯರ್ ಜಗದೀಶ್ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಸರು ವಾಸಿಯಾಗಿದ್ದು, ಶಿಸ್ತು ಸಂಯಮದ ಮೂಲಕ ದೇಶದ ಉತ್ತಮ ಪ್ರಜೆ ಯಾಗಬೇಕು ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಅನಿರುದ್ದ್ ಮಾತನಾಡಿ, ಭಾರತದ ಹೆಗ್ಗಳಿಕೆ ಸಾಕ್ಷಿಯಾದ ಮಹಾನ್ ವ್ಯಕ್ತಿಗಳ ಬಗ್ಗೆ ವರ್ಣಿಸಿ ಅವರು ದೇಶಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು.
ಕರ್ನಲ್ ಶ್ಯಾನ್ ಬೊಗರ ನಾರಾಯಣ ಮೂರ್ತಿ ಮಾತನಾಡಿ, 1954 ರಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಹಿಂದಿನ ದಿನವನ್ನು ನೆನೆದರು. ಜೀವನದಲ್ಲಿ ಹಣ ಮುಖ್ಯವಲ್ಲ. ಪುಸ್ತಕ ಓದುದರಿಂದ ಜ್ಞಾನ ಶಕ್ತಿ ಹೆಚ್ಚುತ್ತದೆ. ಪ್ರಶಸ್ತಿ ದೊರೆಯದ ವಿದ್ಯಾರ್ಥಿಗಳನ್ನು ಪೋಷಕರು ಹೀಯಾಳಿಸಬೇಡಿ ಅವರು ಕೂಡ ಉತ್ತಮ ಪ್ರಜೆಯಾಗಲು ಸಾಧ್ಯವಿದೆ ಎಂದರು. ಇದೇ ಸಂದರ್ಭ ಗ್ರಂಥಾಲಯಕ್ಕೆ 10 ಸಾವಿರ ಮೊತ್ತದ ಪುಸ್ತಕಗಳನ್ನು ನೀಡುವುದಾಗಿ ಘೋಷಿಸಿದರು.
ತಾ.ಪಂ ಮಾಜಿ ಸದಸ್ಯೆ ಉಮಾ ಪ್ರಭು, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಚೇನಂಡ ಬೋಪ್ಪಯ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ರತ್ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷೆ ಪುಷ್ಪ, ಅನುಪ0, ಸ್ಮಿತಾ, ಶಿಕ್ಷಕಿ ಆರ್ಶಿಯ,ಗ್ರಾಮ ಪಂಚಾಯಿತಿ ಸದಸ್ಯರು, ಪೋಷಕರು, ಮತ್ತಿತರರು ಇದ್ದರು.
ವಿದ್ಯಾರ್ಥಿಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ವತಿಯಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಸ್ವಾಗತವನ್ನು ಮುಖ್ಯ ಶಿಕ್ಷಕಿ ಮೀನಾ ನಡೆಸಿದರು. ನಿರೂಪಣೆಯನ್ನು ಶಿಕ್ಷಕಿ ಜಯ ಪ್ರದಾ ಹಾಗೂ ವಂದನೆಯನ್ನು ದಮಯಂತಿ ನೆರವೇರಿಸಿದರು.
ವರದಿ : ಅಶ್ರಫ್