ಮಡಿಕೇರಿ ಫೆ.2 : ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶ್ರೀಶಕ್ತಿ ವೃದ್ಧಾಶ್ರಮದ ವಾಸಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ ನಡೆಯಿತು.
ನಗರದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮದ 25 ವಾಸಿಗಳಿಗೆ ಉಚಿತವಾಗಿ ದಂತ ತಪಾಸಣೆ ಕೈಗೊಳ್ಳಲಾಯಿತು. ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳು, ಬಾಯಿಯ ಕ್ಯಾನ್ಸರ್ ಬಗ್ಗೆ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆ, ದಂತವೈದ್ಯೆ ಡಾ.ದೀಪ ವಿ ಮಾಹಿತಿ ನೀಡಿದರು.
ಸಂಸ್ಥೆಯ ವ್ಯವಸ್ಥಾಪಕ ಸತೀಶ್, ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಸದಸ್ಯೆಯರಾದ ಉಮಾಗೌರಿ, ಅಗ್ನೇಸ್ ಮುತ್ತಣ್ಣ ಹಾಜರಿದ್ದರು.