ವಿರಾಜಪೇಟೆ ಫೆ.13 : ವಿರಾಜಪೇಟೆ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ನಲ್ಲಿ ಒಟ್ಟು 1699 ಪ್ರಕರಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 454 ರಾಜಿಯಾದ ಪ್ರಕರಣಗಳಲ್ಲಿ 159 ಚೆಕ್ ಬೌನ್ಸ್ ಪ್ರಕರಣ ಹಾಗೂ ಸಿವಿಲ್ ದಾವೆಗಳು 42 ಪ್ರಕರಣ ಸೇರಿದಂತೆ ಉಳಿದ ಪ್ರಕರಣಗಳು ಇತ್ಯರ್ಥ ಗೊಂಡಿರುತ್ತವೆ.
ರಾಜಿಯಾದ ಪ್ರಕರಣಗಳಲ್ಲಿ ಇತ್ಯರ್ಥವಾದ ಹಣದ ಮೊತ್ತ 3,46,43697 ರೂ, ಆಗಿರುತ್ತದೆ.
ಲೋಕ ಅದಾಲತ್ನಲ್ಲಿ ಎರಡನೆ ಅಪರ ಜಿಲ್ಲಾ ಸತ್ರ ನ್ಯಾಯಾಧಿಶರಾದ ಎಸ್.ಸುಜಾತ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಜಿ.ಲೋಕೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಕೊಠಾರಿ, ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಮಹಾಲಕ್ಷ್ಮಿ ಹಾಗೂ ಕೆ.ಎಸ್.ಆಶಾ ಮತ್ತು ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋಧ್ ಉಪಸ್ಥಿತರಿದ್ದು, ಸಂಧಾನಕಾರರಾಗಿ ವಕೀಲರಾದ ಸಿ. ದರ್ಶನ್, ಎಂ.ಕೆ. ಧನ್ಯ, ಬಿ.ಎನ್. ಜಗದೀಶ್, ಬಿ.ಬಿ. ಮಾದಪ್ಪ, ಎಂ.ಹೆಚ್. ನವಲಗುಂದ ಇತರರು ಭಾಗವಹಿಸಿದ್ದರು.