ಚೆಟ್ಟಳ್ಳಿ ಫೆ.16 : ಜರ್ಮನ್‍ನಿಂದ ಮೈಸೂರಿಗೆ ಆಗಮಿಸಿದ ಕಾಯ, ಜೋಹಾನಿ, ಲಿನ್ಯೂಸ್, ಲೂಹಿಸ್, ಜಾಶ್ಮಿನ್ ಎಂಬ ವಿದೇಶಿಯರು ಕೊಡಗಿನ ಕಾಫಿ ಕುಯ್ಲು ಅನುಭವಿಸಲು ಕೊಡಗಿಗೆ ಬಂದಿಳಿದರು.
ಚೆಟ್ಟಳ್ಳಿಯ ಮುಳ್ಳಂಡ ಅಂಜನ್ ಮುತ್ತಪ್ಪ ಅವರನ್ನು ಸಂಪರ್ಕಿಸಿ ಚೆಟ್ಟಳ್ಳಿಯ ಕಾಫಿ ತೋಟದಲ್ಲೆಲ್ಲ ಸುತ್ತಾಡಿದ ವಿದೇಶಿಗರು, ಅಂಜನ್‍ನಿಂದ ಕಾಫಿ ವೈಶಿಷ್ಯದ ಬಗ್ಗೆ ಮಾಹಿತಿ ಪಡೆದರು.
ಅಲ್ಲದೆ ಬೆಳಗಿನಿಂದ ಮಧ್ಯಾಹ್ನದ ವರೆಗೆ ಕಾಫಿ ಕುಯಿದು ಆನಂದಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಿಗರು ಕೊಡಗಿನ ಹಸಿರು ಪರಿಸರದಲ್ಲಿನ ಕಾಫಿಯನ್ನು ಕುಯಿದು ತುಂಬಾನೆ ಆನಂದಿಸಿದ್ದೇವೆ. ಇಂದು ನಮಗೆ ಹೊಸ ಅನುಭವವನ್ನು ನೀಡಿದೆ ಎಂದು ತಿಳಿಸಿದರು.
ಕೊಡಗಿನ ಕಾಫಿಯನ್ನು ಸವಿದು, ಕೊಡಗಿನ ಕಾಫಿ ಹಿಂದೆ ಹಲವರ ಪರಿಶ್ರಮವಿದೆ. ಇಲ್ಲಿನ ಪರಿಸರ ಆಕರ್ಷಣೀಯವಾಗಿದ್ದು, ಮತ್ತೆ ಬರುವುದಾಗಿ ಹೇಳಿ ತೆರಳಿದರು.
ವರದಿ-ಪುತ್ತರಿರ ಕರುಣ್ ಕಾಳಯ್ಯ










