ಮಡಿಕೇರಿ,ಫೆ.20 ; ಮಾದಾಪುರ ಬಳಿಯ ಜಂಬೂರು ಬಾಣೆಯ ಆಶ್ರಯ ಕಾಲೋನಿಯ ಶ್ರೀ ಭಗತ್ ಸಿಂಗ್ ಯುವಕ ಸಂಘದ ೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆಶ್ರಯ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಈ ಪೈಕಿ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟ ಗಳಿಸಿದೆ. ದ್ವಿತೀಯ ಸ್ಥಾನವನ್ನು ಮಡಿಕೇರಿಯ ನಾಟ್ಯಕಲಾ ತಂಡ ಹಾಗೂ ಸೋಮವಾರಪೇಟೆಯ ಅಡ್ವೆಂಚರ್ ಡಾನ್ಸ್ ಕಂಪೆನಿ ತಂಡಗಳು ಹಂಚಿಕೊಂಡವು.
ಇದರೊಂದಿಗೆ 15 ವರ್ಷ ಮೇಲ್ಪಟ್ಟ ಸೋಲೋ ನೃತ್ಯ ವಿಭಾಗದಲ್ಲಿ ಕಿಂಗ್ಸ್ ಆಫ್ ಕೂರ್ಗ್ ವರ್ಷಿಣಿ ಶೆಟ್ಟಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾಳೆ. ಕಿಂಗ್ಸ್ ನೃತ್ಯ ತರಬೆತುದಾರರಾದ ಮಹೇಶ್ ಹಾಗೂ ಕಿರಣ್ ಅವರುಗಳ ಮಾರ್ಗದರ್ಶನದಲ್ಲಿ ಕಲಾವಿದರು ರಾಮಾಯಣದ ಸಿತಾಪಾಹರಣ, ರಾವಣ ಸಂಹಾರ ಹಾಗೂ ಶ್ರೀರಾಮನ ಪಟ್ಟಾಭಿಷೇಕ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.